ಮೂಡುಬಿದಿರೆ

ಮಾರೂರು – ಹೊಸಂಗಡಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ಕೆ 5 ಲಕ್ಷ ರೂ. ಚೆಕ್ ಹಸ್ತಾಂತರ

ಮೂಡುಬಿದಿರೆ ತಾಲೂಕಿನ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನ ಮಾರೂರು – ಹೊಸಂಗಡಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ.ಡಿ. ವೀರೇಂದ್ರ ಹೆಗಡೆಯವರು ಮಂಜೂರು ಮಾಡಿರುವ ರೂಪಾಯಿ 5 ಲಕ್ಷದ ಅನುದಾನದ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರು ದಿನೇಶ್ ಡಿ. ರವರು ದೇವಸ್ಥಾನದ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ದೇವಾಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ ಶ್ರೀಪತಿ ಭಟ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಶಂಭು ಏನ್ ಶೆಟ್ಟಿ ಮಾರೂರು ಗುತ್ತು, ಅಧ್ಯಕ್ಷರು ವ್ಯವಸ್ಥಾಪನ ಸಮಿತಿ, ವೆಂಕಟರಾಜು, ಅರ್ಚಕರು, ಸುಧಾಕರ್ ಶೆಟ್ಟಿ, ಸುಶಾಂತ್ ಕರ್ಕೇರ, ಯೋಜನಾಧಿಕಾರಿ ಧನಂಜಯ, ಮೇಲ್ವಿಚಾರಕರು ಶ್ರೀಮತಿ ಸರಸ್ವತಿ, ಒಕ್ಕೂಟದ ಪದಾಧಿಕಾರಿಗಳು ರತ್ನಕರ ಶೆಟ್ಟಿ, ಒಕ್ಕೂಟದ ವಲಯ ಅಧ್ಯಕ್ಷರು ಅರುಣ್, ಸೇವಾಪ್ರತಿನಿಧಿ ಸೌಮ್ಯ, ಜಗದೀಶ್ ಆಚಾರ್ಯ, ದಿನೇಶ್ ಮಾರೂರು, ಕೇಶವ ಆಚಾರ್ಯ ದೇವಸ್ಥಾನದ ಸಮಿತಿ ಯ ಪದಾಧಿಕಾರಿಗಳು ಮತ್ತು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ರಾಜ್ಯ ಮಟ್ಟದ ಮಲ್ಲಕಂಬ ಸ್ಪರ್ಧೆಯಲ್ಲಿ ಆಳ್ವಾಸ್ ತಂಡದ ಸಾಧನೆ

Madhyama Bimba

  ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶಾಸಕ ಯಶಪಾಲ್ ವಿರುದ್ಧ ದೂರು

Madhyama Bimba

ಆಳ್ವಾಸ್‌ನಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಮಾನವ ಸರಪಳಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More