ಕಾರ್ಕಳ

ಬೈಲೂರು ವಿನಾಯಕ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ

ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ (ರಿ) ಬೈಲೂರು ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಾಲಿನಿ ಸುಕೇಶ್ ಪೂಜಾರಿ, ಕಾರ್ಕಳ ಸಂಗಮ ಸಂಜೀವಿನಿ ತಾಲೂಕು ಮಟ್ಟದ ಅಧ್ಯಕ್ಷರಾದ ಶ್ರೀಮತಿ ರೇವತಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ಹಾಗೂ ಸಂಜೀವಿನಿ ಸದಸ್ಯರಾದ ನೀರೆ ಬೈಲೂರಿನ ಮಾಲಿನಿ ಜೆ.ಶೆಟ್ಟಿ, ಜೀವನೋಪಾಯ ಸಮಿತಿಯ ಅಧ್ಯಕ್ಷರಾದ ತಸ್ವಿನ್ ಹಾಗೂ ಕಾರ್ಯದರ್ಶಿ ಸರೋಜ ಉಪಸ್ಥಿತರಿದ್ದರು.

ಸಂಜೀವಿನಿ ಸದಸ್ಯರಾದ ಶ್ರೀಮತಿ ರತಿ, ರೇವತಿ ಮೆಡಂ, ಮಾಲಿನಿ ಇವರು ಆಟಿ ತಿಂಗಳ ಆಹಾರ ಪದಾರ್ಥಗಳ ಬಗ್ಗೆ, ಔಷದಿಗಳ ಬಗ್ಗೆ ಹಿಂದಿನ ಕಾಲದ ಸ್ಥಿತಿಗತಿಗಳ ಬಗ್ಗೆ ಸವಿವಿಸ್ತಾರವಾಗಿ ತಿಳಿಸಿದರು.
ಸುಜಾತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚೇತನಾ ಸ್ವಾಗತಿಸಿದರು. ಸೌಮ್ಯ ಧನ್ಯವಾದವಿತ್ತರು.

Related posts

ಬಸ್ಸಿನಲ್ಲಿ ಹೆಚ್ಚುವರಿ ಟಿಕೆಟ್ ದರ ವಸೂಲಿ- ಕಣಂಜಾರು ಗ್ರಾಮಸ್ಥರಿಂದ ಆರ್‌ಟಿಓಗೆ ದೂರು

Madhyama Bimba

ಜೋಡುರಸ್ತೆಯಲ್ಲಿ ಎನ್‌ಪಿ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನೂತನ ಮಳಿಗೆ ಶುಭಾರಂಭ

Madhyama Bimba

ಎಳ್ಳಾರೆ ಮಾವಿನಕಟ್ಟೆ : ಹಲವಾರು ದಿನಗಳಿಂದ ನೀರಿಗಾಗಿ ಪರದಾಟ. !- ಮನೆಮನೆಗೆ ನೀರು ಸರಬರಾಜು ಮಾಡಿದ ಸಮಾಜಸೇವಕ ಗೋಪಿನಾಥ ಭಟ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More