ಮೂಡುಬಿದಿರೆ

ವಿದ್ಯಾರ್ಥಿಗಳ ಬದುಕಿಗೆ ಮೌಲ್ಯಗಳೇ ಮೈಲುಗಲ್ಲು: ವಿವೇಕ ಆಳ್ವ

ಮೂಡುಬಿದಿರೆ : “ವಿದ್ಯಾರ್ಥಿಗಳ ಬದುಕಿಗೆ ಮೌಲ್ಯಗಳೇ ನಿಜವಾದ ಮೈಲುಗಲ್ಲುಗಳಾಗಬೇಕು,” ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ ಪ್ರತಿಪಾದಿಸಿದರು.

ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್, ಸಾಹಿತ್ಯ ಸಂಘ ಹಾಗೂ ಇಕೋಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನವು ಕೇವಲ ಅಂಕ ಗಳಿಕೆ ಹಾಗೂ ಉದ್ಯೋಗದ ಸಿದ್ಧತೆಯಾಗದೆ ಶಿಸ್ತು, ಸೇವೆ, ನಾಯಕತ್ವ ಮತ್ತು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ಕಾಲಘಟ್ಟವಾಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ ಅವರು, “ಮೇಲಿರುವವರೊಡನೆ ವಿಧೇಯತೆ, ಕೆಳಗಿನವರೊಡನೆ ಮಧುರ ಸಮಾನತೆ ಹಾಗೂ ಸಮಾನರೊಡನೆ ಸ್ನೇಹ?ಇವು ನಿಮ್ಮ ಬದುಕಿನ ದಾರಿದೀಪಗಳಾಗಲಿ,” ಎಂದು ಕಿವಿಮಾತು ಹೇಳಿದರು.

ಗುರು-ಹಿರಿಯರ ಮೇಲಿನ ಗೌರವ ಮತ್ತು ತ್ಯಾಗವನ್ನು ಸದಾ ಸ್ಮರಿಸಬೇಕೆಂದ ಅವರು, “ಸೋಲು ಸಾವಲ್ಲ; ಸೋಲಿನ ಬಳಿಕವೂ ಎದ್ದು ನಿಲ್ಲದಿರುವುದೇ ನಿಜವಾದ ಸೋಲು” ಎಂಬ ಸಕಾರಾತ್ಮಕ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ, “ಅಂಕಗಳು ಮತ್ತು ಪ್ರಮಾಣಪತ್ರಗಳು ನಿಮ್ಮ ಸಾಮರ್ಥ್ಯವನ್ನು ಅಳೆಯಬಹುದೇ ಹೊರತು ನಿಮ್ಮ ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳನ್ನಲ್ಲ. ಮನುಷ್ಯನನ್ನು ನಿಜವಾಗಿ ರೂಪಿಸುವ ಶಿಕ್ಷಣವು ತರಗತಿಯ ಹೊರಗಿನ ಇಂತಹ ಚಟುವಟಿಕೆಗಳಿಂದ ಆರಂಭವಾಗುತ್ತದೆ,” ಎಂದರು.

ಹೀಗಾಗಿ ಎನ್‌ಸಿಸಿ ನಮಗೆ ಶಿಸ್ತು ಕೊಡಲಿ. ಎನ್‌ಎಸ್‌ಎಸ್ ನಮಗೆ ಸೇವೆ ಕಲಿಸಲಿ. ರೆಡ್‌ಕ್ರಾಸ್ ನಮ್ಮೊಳಗೆ ಮಾನವೀಯತೆ ಬೆಳೆಸಲಿ. ರೋವರ್ಸ್ ಮತ್ತು ರೇಂಜರ್ಸ್ ಸಾಹಸ ಹಾಗೂ ನಾಯಕತ್ವ ನೀಡಲಿ. ಸಾಹಿತ್ಯ ಸಂಘ ಚಿಂತನೆ ಮತ್ತು ಸಂವೇದನೆ ಮೂಡಿಸಲಿ. ಇಕೋ ಕ್ಲಬ್ ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ಪುನಃ ನೆನಪಿಸಲಿ” ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿದ್ದರು. ವಿವಿಧ ಘಟಕಗಳ ಕನ್ವೀನರ್‌ಗಳಾದ ಲೆಫ್ಟಿನೆಂಟ್ ಮಹೇಂದ್ರಜೈನ್, ಪ್ರಶಾಂತ್ ಶೆಟ್ಟಿ, ಪ್ರದೀಪ್ ಕೆ.ಪಿ., ಸಂಧ್ಯಾಕುಮಾರಿ, ಡಾ. ವಾದಿರಾಜ ಕಲ್ಲೂರಾಯ, ಅಶೋಕ್ ಶೆಟ್ಟಿ ಹಾಗೂ ಅಶೋಕ ಎನ್ ಮತ್ತು ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಪುಷ್ಪರಾಜ ಬಿ. ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಸುನಾದ್ ರಾಜ್ ಜೈನ್ ವಂದಿಸಿದರು. ಉಪನ್ಯಾಸಕಿ ವ್ಯಾಲೆಂಟಿನ ಮಿರಾಂಡಾ ಕಾರ್ಯಕ್ರಮ ನಿರೂಪಿಸಿದರು.

Related posts

ಜೈ ಭೀಮ್ ಯುವ ಸೇನೆಯಿಂದ 200 ವಿದ್ಯಾಥಿ೯ಗಳಿಗೆ ಉಚಿತ ಪುಸ್ತಕ ವಿತರಣೆ

Madhyama Bimba

 ಕಲ್ಲಬೆಟ್ಟು ಸೊಸೈಟಿ, ನಿರ್ದೇಶಕರ ಘೋಷಣೆ

Madhyama Bimba

ತಂತ್ರವೇ ಯಶಸ್ಸಿನ ಮೂಲ; ಕೇವಲ ಕಲ್ಪನೆಗಳಿಂದ ಉದ್ಯಮ ಯಶಸ್ವಿಯಾಗುವುದಿಲ್ಲ: ವೇಣು ಶರ್ಮಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More