ಕಾರ್ಕಳಹೆಬ್ರಿ

ವಿಜ್ಞಾನ ಮತ್ತು ಗಣಿತ ಮೇಳದಲ್ಲಿ ಅಮೃತ ಭಾರತಿ ವಿದ್ಯಾಲಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ಜಿಲ್ಲಾ ಮಟ್ಟದ ವಿಜ್ಞಾನ,ಗಣಿತ ಮತ್ತು ಸಂಸ್ಕೃತಿ ಜ್ಞಾನ ಮೇಳದ ಕಿಶೋರ ವರ್ಗದಲ್ಲಿ  ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು  ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 8 ಪ್ರಥಮ ಸ್ಥಾನ ಸಹಿತ ಒಟ್ಟು 16 ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕ್ಲೇ ಮೊಡೆಲಿಂಗ್ ನಲ್ಲಿ ಚಿರಾಗ್ ಪ್ರಥಮ ಸ್ಥಾನ  , ಆಶುಭಾಷಣದಲ್ಲಿ ಗಗನ್ ಪ್ರಥಮ ಸ್ಥಾನ , ಗಣಿತ ಪ್ರಯೋಗದಲ್ಲಿ ವರ್ಷಿತ್ ಪ್ರಥಮ ಸ್ಥಾನ ,  ಕ್ಷೇತ್ರ ಗಣಿತ ಸಂಬಂಧಿಸಿದ ಮಾದರಿ ಪ್ರದರ್ಶನದಲ್ಲಿ ಆತ್ರೇಯ ಹೆಬ್ಬಾರ್ ಪ್ರಥಮ ಸ್ಥಾನ , ವಿಜ್ಞಾನ ಪ್ರಯೋಗದಲ್ಲಿ ಪಲ್ಲವಿ ಪ್ರಥಮಸ್ಥಾನ , ವಿಜ್ಞಾನ ಪರಮಾಣು ರಚನೆ ಮಾದರಿ ಪ್ರದರ್ಶನದಲ್ಲಿ ಐಸಿರಿ ಎಂ ಪ್ರಥಮ ಸ್ಥಾನವನ್ನು , ವಿಜ್ಞಾನ ಮಾನವನ ಹೃದಯದ ಕಾರ್ಯ ವಿಧಾನದ ಮಾದರಿ ಪ್ರದರ್ಶನದಲ್ಲಿ ಸ್ಮಿತಿ ಪ್ರಥಮ ಸ್ಥಾನವನ್ನು , ವಿಜ್ಞಾನ ನವಚಾರಿತ ಮಾದರಿಯಲ್ಲಿ ಪ್ರದ್ವಿತ್ ಪ್ರಥಮ ಸ್ಥಾನವನ್ನು  ಪಡೆದಿದ್ದಾರೆ.
ಹಾಗೆಯೇ ವಿಜ್ಞಾನ ಪತ್ರವಾಚನದಲ್ಲಿ ಆತ್ರೇಯ ನಾಯಕ್ ದ್ವಿತೀಯ  ಸ್ಥಾನವನ್ನು , ವಿಜ್ಞಾನ  ಸೆನ್ಸಾರ್ ಮಾದರಿ ಪ್ರದರ್ಶನದಲ್ಲಿ ಮಂಜುನಾಥ ದ್ವಿತೀಯ ಸ್ಥಾನ , ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ಸಂಕೇತ್ ಪೈ, ಚಿರಂತನ್, ನಿವೇದಿತಾ ದ್ವಿತೀಯ ಸ್ಥಾನವನ್ನು , ಗಣಿತ ಸಂಶೋಧನಾರ್ಹ ಮಾದರಿ ಪ್ರದರ್ಶನದಲ್ಲಿ ಶ್ರೀನಿವಾಸ ದ್ವಿತೀಯ ಸ್ಥಾನ, ಗಣಿತ ಮಾದರಿ ಪ್ರದರ್ಶನದಲ್ಲಿ ವಿಕಾಸ್ ದ್ವಿತೀಯ ಸ್ಥಾನ , ವಿಜ್ಞಾನ ಚಲನೆ ಮಾದರಿ ಪ್ರದರ್ಶನದಲ್ಲಿ ಸಾಯಿರಾಂ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ವೇದ ಗಣಿತ ರಸಪ್ರಶ್ನೆಯಲ್ಲಿ ಅವನಿ, ಸಾನ್ವಿ, ಗಗನ್ಯ ತೃತೀಯ ಸ್ಥಾನವನ್ನು ,  ವಿಜ್ಞಾನ ರಸಪ್ರಶ್ನೆಯಲ್ಲಿ ಪ್ರಥಮ್ ಎನ್ ರಾವ್, ಆಯುಷ್ ಪೈ, ಅವಿಘ್ನ ತೃತೀಯ ಸ್ಥಾನ , ಪಡೆದಿದ್ದಾರೆ.

Related posts

ಮಾತಿಬೆಟ್ಟಿನ ಹಿರಿಯ ಕೃಷಿಕ ಹಾಗೂ ವ್ಯಾಪಾರಿ ಶಿಶುಪಾಲ್ ಜೈನ್ ನಿಧನ

Madhyama Bimba

ಕಾರ್ಕಳ: ಕ್ಷಯಮುಕ್ತ ಭಾರತ ಅಭಿಯಾನ – ಆರೋಗ್ಯ ತಪಾಸಣಾ ಶಿಬಿರ

Madhyama Bimba

ವಿಕಾಸ ಉದ್ಯೋಗ ಸೇತು ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More