ಕಾರ್ಕಳಹೆಬ್ರಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು- ಶಾಲಾ ನಾಯಕ ಹಾಗೂ ಉಪನಾಯಕನ ಆಯ್ಕೆ

ಬಸ್ರಿ ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  2026-27ನೇ ಶೈಕ್ಷಣಿಕ ಸಾಲಿನ ಶಾಲಾ ನಾಯಕ ಹಾಗೂ ಉಪನಾಯಕರ ಚುನಾವಣೆಯು ಜೂ. 06 ರಂದು ಇವಿಎಂ ಮೂಲಕ ಯಶಸ್ವಿಯಾಗಿ ನಡೆಸಲಾಯಿತು.

ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಿಸೈಡಿಂಗ್ ಆಫೀಸರ್ ಹಾಗೂ ಪೋಲಿಂಗ್ ಆಫೀಸರ್ ಗಳಾಗಿ ಕರ್ತವ್ಯ ನಿರ್ವಹಿಸಿ ಚುನಾವಣಾ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಟ್ಟರು. ಶಿಕ್ಷಕ ವೃಂದದ ಸಂಪೂರ್ಣ ಮಾರ್ಗದರ್ಶನದಲ್ಲಿ ಚುನಾವಣೆಯು ಮಾದರಿ ಚುನಾವಣೆಯಾಗಿ ಮೂಡಿಬಂದಿತು. ಮತದಾನ ಪ್ರಕ್ರಿಯೆಯ ನಂತರ ನಡೆದ ಮತ ಎಣಿಕೆಯಲ್ಲಿ 7ನೇ ತರಗತಿಯ ತೇಜಸ್ ಅವರು ಅತಿ ಹೆಚ್ಚು ಮತಗಳನ್ನು ಪಡೆದು ಶಾಲಾ ನಾಯಕರಾಗಿ ಆಯ್ಕೆಯಾದರು. ಹಾಗೆಯೇ 6ನೇ ತರಗತಿಯ ಅವಿಶ್ ಜೆ ಆಚಾರ್ಯ ಅವರು ಶಾಲಾ ಉಪನಾಯಕರಾಗಿ ಆಯ್ಕೆಯಾದರು.

ಈ ಚುನಾವಣೆಯ ಮೂಲಕ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾನದ ಮಹತ್ವ ಹಾಗೂ ಚುನಾವಣೆ ಹೇಗೆ ನಡೆಯುತ್ತದೆ ಎಂಬುದರ ಕುರಿತು ಸ್ಪಷ್ಟವಾದ ಅರಿವು ಪಡೆದುಕೊಂಡರು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಹಾಗೂ ನಾಗರಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು.

ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕವೃಂದದವರು ಆಯ್ಕೆಯಾದ ಶಾಲಾ ನಾಯಕ ಹಾಗೂ ಉಪನಾಯಕರನ್ನು ಅಧಿಕೃತವಾಗಿ ಘೋಷಿಸಿ ಅಭಿನಂದಿಸಿದರು.

Related posts

ಹೆಬ್ರಿ: ವಿಷ ಪದಾರ್ಥ ಸೇವಿಸಿ ಆಸ್ಪತ್ರೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೇ ಮೃತ್ಯು

Madhyama Bimba

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಡಾ.ಕೀರ್ತಿನಾಥ್ ಬಳ್ಳಾಳ್‌ರಿಗೆ ಬೀಳ್ಕೊಡುಗೆ

Madhyama Bimba

ಮುಂಗಾರು ಬೆಳೆ ಸಮೀಕ್ಷೆ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More