ಕಾರ್ಕಳ ಬೈಪಾಸ್ – ಕುದುರೆಮುಖ ದ್ವಿಪಥ ರಸ್ತೆಯ ಕಾಮಗಾರಿ ಪ್ರಾರಂಭಗೊಳ್ಳುವ ಮೊದಲು ಅಡ್ಡರಸ್ತೆಗಳಿಗೆ ನಾಮಫಲಕಗಳಿದ್ದು ಕಾಮಗಾರಿಯ ವೇಳೆ ಅವುಗಳನ್ನು ತೆಗೆದಿರುತ್ತಾರೆ. ಕರಿಯಕಲ್ಲು ಜಂಕ್ಷನ್ ಬಳಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ – ಸರಕಾರಿ ಆಸ್ಪತ್ರೆ , ಕಾರ್ಕಳ ಬಸ್ಸು ನಿಲ್ದಾಣಕ್ಕೆ ಹೋಗುವ ಅಡ್ಡರಸ್ತೆ ಇದ್ದು, ರಸ್ತೆ ಕಾಮಗಾರಿಯಿಂದ ಕೂಡು ರಸ್ತೆ ಗೋಚರಿಸದಂತಾಗಿದ್ದು ಇದನ್ನು ಮನಗಂಡ ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರಭೂಮಿಯ ವ್ಯವಸ್ಥಾಪನಾ ಸಮಿತಿಯು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಹೋಗುವ ಅಡ್ಡ ರಸ್ತೆಗೆ ನಾಮಫಲಕವನ್ನು ಅಳವಡಿಸಿ ಅದರ ಉದ್ಘಾಟನೆಯನ್ನು ನ್ಯಾಯವಾದಿ ಎಂ.ಕೆ. ಸುವೃತ್ ಕುಮಾರ್ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಹಿಂದೂ ರುದ್ರ ಭೂಮಿಯ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಪ್ರಕಾಶ್ ರಾವ್, ಸಹ ಸಂಚಾಲಕ ರಾಜೇಶ್ ಶೆಟ್ಟಿ, ಸದಸ್ಯರಾದ ಅರವಿಂದ ಪೈ, ಜಯಂತ್ ಕುಮಾರ್, ಸುರೇಂದ್ರ ರಾವ್, ಪಲ್ಲವಿ ಸುರೇಶ್ ಕೋಟ್ಯಾನ್, ನಿವೃತ್ತ ಮುಖ್ಯೋಪಾಧ್ಯಾಯ ವಸಂತ್ ಎಂ, ಸ್ವಚ್ಛ ಬ್ರಿಗೇಡ್ ಕಾರ್ಕಳದ ಫೆಲಿಕ್ಸ್ ವಾಝ್, ಯುವಶಕ್ತಿ ಯೂತ್ ಕ್ಲಬ್ಬಿನ ಅಧ್ಯಕ್ಷ ವೆಂಕಟೇಶ್, ಯಜ್ನೇಂದ್ರ ಆಚಾರ್ಯ, ಪ್ರಕಾಶ್ ಕೋಟ್ಯಾನ್, ಶ್ರೀಕಾಂತ್ ಶೆಟ್ಟಿ, ಉಪಸ್ಥಿತರಿದ್ದರು.
