ಕಾರ್ಕಳ

ಕೆಜಿಟಿಟಿಐ ಕಾರ್ಕಳ: ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭ

ಕಾರ್ಕಳದ ಕಾಬೆಟ್ಟುನಲ್ಲಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.


ಸಂಸ್ಥೆಯ ಸುತ್ತಮುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ನಂತರ ನಡೆದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಗಿರಿಧರ್ ಸಾಲಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ವಿಶ್ವ ಪರಿಸರ ದಿನ ಸಂಬಂಧಿತ ಸ್ಲೈಡ್ ಪ್ರದರ್ಶನ ಮೂಲಕ ಹಸಿರು ಮನೆ ಪರಿಣಾಮ, ಆಮ್ಲ ಮಳೆ, ಜಾಗತಿಕ ತಾಪಮಾನ, ಓಝೋನ್ ಪದರದ ಕ್ಷೀಣಿಸುವಿಕೆ ಬಗ್ಗೆ ಮಾಹಿತಿ ನೀಡಿ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು.

ಕಾರ್ಕಳ ಉಪವಲಯ ಅರಣ್ಯಾಧಿಕಾರಿ ರೊಹಿನಿ ತಲ್ಲೂರ ಮಾತನಾಡಿ. “ಪರಿಸರವೆಂದರೆ ಕೇವಲ ಮರಗಳಲ್ಲ ನಮ್ಮ ಸುತ್ತಮುತ್ತಲಿನ ಪ್ರಕೃತಿ ಜೀವಿಗಳು ಗಾಳಿ, ನೀರು, ಮಣ್ಣು, ಜಲಚರ ಮತ್ತು ಸಸ್ಯಗಳ ಸಮೂಹವನ್ನು ಪರಿಸರ ಎನ್ನುತ್ತೇವೆ. ಆದರೆ ನಮಗೆ ಗಿಡಮರಗಳಿಂದ ಹೆಚ್ಚು ಉಪಯುಕ್ತವಾದ ಆಮ್ಲಜನಕ ದೊರೆಯುವುದರಿಂದ ಮರಗಳನ್ನು ಹೆಚ್ಚು ಅವಲಂಬಿಸಿದ್ದೇವೆ ” ಎಂದು ಹೇಳಿ ಪರಿಸರ ಸಂರಕ್ಷಣೆ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕೌಶಲ್ಯ ತರಬೇತಿ ಪೂರೈಸಿದ 50 ಜನ ಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಹಾಗೂ ಪ್ರಮಾಣ ಪತ್ರ ಪಡೆದ ಶಿಕ್ಷಣಾರ್ಥಿಗಳು ಸಂಸ್ಥೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಗಿರಿಧರ್ ಸಾಲಿಯಾನ್, , ಗಸ್ತು ಅರಣ್ಯ ಪಾಲಕರಾದ ಯಮನೂರು, ಸರಕಾರಿ ಪಾಲಿಟೆಕ್ನಿಕ್ ನ ಪ್ರಾಧ್ಯಾಪಕರಾದ ಚಿತ್ರಕುಮಾರ್ ಕೆ.ವಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕಿ ವಿಂಧ್ಯಾ ಕಾರ್ಯಕ್ರಮ ನಿರೂಪಿಸಿದರು

Related posts

“ಕರ್ನಾಟಕ ಸರಕಾರದ ಅವೈಜ್ಞಾನಿಕ ಮತ್ತು ಅಸಮರ್ಪಕ ಘನತ್ಯಾಜ್ಯ ನಿರ್ವಹಣೆ ನೀತಿಯಿಂದಾಗಿ ಕಾರ್ಕಳ ನಗರ ದುರ್ನಾತದತ್ತ’: ರವೀಂದ್ರ ಮೊಯ್ಲಿ

Madhyama Bimba

ಬೈಲೂರು: ಬಸ್ರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ

Madhyama Bimba

ಹೆಬ್ರಿ ಅಲಯನ್ಸ್ ಕ್ಲಬ್ ನಿಂದ ಲೆಕ್ಕಪರಿಶೋಧಕರಿಗೆ ಗೌರವ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More