ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರಾವಣ ಮಾಸದ ಪೂರ್ಣಿಮೆಯಂದು ಸಹೋದರ – ಸಹೋದರಿ ಸ್ನೇಹ ಸಂಕೇತವಾಗಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅಮೃತ ಭಾರತಿ ವಿದ್ಯಾಕೇಂದ್ರದ ಕನ್ನಡ ಶಿಕ್ಷಕಿ ವಿಮಲಾ ಮಾತನಾಡಿ, ರಕ್ಷಾ ಬಂಧನ ಭಾವನೆಗಳ ಹಬ್ಬ, ವಾತ್ಸಲ್ಯದ ಹಬ್ಬ, ಮೇಲು – ಕೀಳು ಇಲ್ಲದ ಭಾರತೀಯರ ಶ್ರೇಷ್ಠ ಹಬ್ಬ, ಸಂಘಜೀವಿಯಾದ ಮನುಷ್ಯನಿಗೆ ಮಾನವೀಯ ಸಂಬಂಧವನ್ನು ಕಲ್ಪಿಸುವ ಗುರುತರವಾದ ಜವಾಬ್ದಾರಿ ಹಂಚುವ ಹಬ್ಬವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ, ಸಂಸ್ಥೆಯ ಗುರುವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕಿಯರು ಗುರೂಜಿಯವರಿಗೆ ರಕ್ಷೆಯನ್ನು ಕಟ್ಟಿ ಆಶೀರ್ವಾದ ಪಡೆದರು.
ವಿದ್ಯಾರ್ಥಿಗಳು ಪರಸ್ಪರ ಅರಸಿನ ಕುಂಕುಮ ಹಚ್ಚಿ, ಆರತಿ ಬೆಳಗಿ, ಸಿಹಿ ಹಂಚಿ ಸಂಭ್ರಮಿಸಿದರು. ಹಾಗೆಯೇ ಹೆಬ್ರಿ ನಗರ ಪರಿಸರದಲ್ಲಿ ವಿದ್ಯಾರ್ಥಿಗಳು ರಕ್ಷೆಯನ್ನು ಕಟ್ಟಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವಿದ್ಯಾರ್ಥಿನಿಯರಾದ ಸಮೃದ್ಧಿ ಸ್ವಾಗತಿಸಿ , ಚಿನ್ಮಯಿ ನಿರೂಪಿಸಿ, ಪ್ರಾರ್ಥನಾ ವಂದಿಸಿದರು. ಸಂಸ್ಥೆಯ ಶಿಕ್ಷಕಿ ಸುಚಿತ್ರಾ ರಕ್ಷಾ ಬಂಧನದ ಸಂದೇಶ ವಾಚಿಸಿದರು.
