ಮೂಡುಬಿದಿರೆ

ಮಹಾನೀರ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದ ಕೈಪಿಡಿ ಬಿಡುಗಡೆ

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ, ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿರುವ ಒಂದು ದಿನದ ರಾಷ್ಟ್ರೀಯಮಟ್ಟದ ಬಹುವಿಷಯಗಳ ವಿಚಾರಸಂಕಿರಣದ ಕೈಪಿಡಿಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಬಿಡುಗಡೆಗೊಳಿಸಿದರು.

’ಹಣಕಾಸಿನ ಒಳಗೊಳ್ಳುವಿಕೆ. ಕೌಶಲ್ಯ ಭಾರತ ಮತ್ತು ಉದ್ಯಮಶೀಲತೆ: ಅಂತರ್ಗತ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಯ ಹಾದಿಗಳು’ ಎಂಬ ವಿಷಯದ ಕುರಿತು ಸೆ.26 ರಂದು ಶ್ರೀ ಮಹಾವೀರ ಕಾಲೇಜಿನಲ್ಲಿ ವಿಚಾರಸಂಕಿರಣ ನಡೆಯಲಿದೆ.

ಹಣಕಾಸಿನ ಒಳಗೊಳ್ಳುವಿಕೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಡಿಜಿಟಲ್ ಆರ್ಥಿಕತೆ ಹಾಗೂ ಸುಸ್ಥಿರ ಅಭಿವೃದ್ಧಿ ಸೇರಿದಂತೆ ವಿವಿಧ ಉಪ ವಿಷಯಗಳ ಕುರಿತು ಶಿಕ್ಷಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಆಸಕ್ತರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧಗಳಿಗೆ ವಿಶೇಷ ಅವಕಾಶ ನೀಡಲಾಗಿದ್ದು, ಉತ್ತಮ ಗುಣಮಟ್ಟದ ವಿದ್ಯಾರ್ಥಿ ಪ್ರಬಂಧಕ್ಕೆ ಪ್ರಶಸ್ತಿ ನೀಡಲಾಗುವುದು.

ಪ್ರಬಂಧ ಸಾರಾಂಶ ಸಲ್ಲಿಕೆಗೆ ಸೆಪ್ಟೆಂಬರ್ 10, ಪೂರ್ಣ ಪ್ರಬಂಧ ಸಲ್ಲಿಕೆಗೆ ಸೆಪ್ಟೆಂಬರ್ 15 ಮತ್ತು ನೋಂದಣಿಗೆ ಸೆಪ್ಟೆಂಬರ್ 20,2026 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳು ಕಾಲೇಜು ವೆಬ್‌ಸೈಟ್  https://srimahaveeracollege.com ನಲ್ಲಿ ಸಿಗಲಿದೆ.’

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ, ಒಕ್ಕೂಟದ ಕಾರ್ಯದರ್ಶಿ ಅಜಿಲ್ ಮೆಲ್ವಿನ್ ಕ್ಯಾಸ್ತಲಿನೋ, ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಹರೀಶ್, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ ಗೀತಾಕುಮಾರಿ ಹಾಗೂ ಉಪನ್ಯಾಸಕಿ ಶ್ರೀಗೌರಿ ಉಪಸ್ಥಿತರಿದ್ದರು.

 

Related posts

ಮೂಡುಬಿದಿರೆ ದಲಿತ ಕುಂದು ಕೊರತೆ ಸಭೆಯಲ್ಲಿ ಇಲಾಖಾಧಿಕಾರಿಗಳೇ ಗೈರು!

Madhyama Bimba

ಯುವವಾಹಿನಿ ಮೂಡುಬಿದಿರೆ ಘಟಕದಿಂದ ಕಲೆ ಸಾಹಿತ್ಯ ಭಜನಾ ಮತ್ತು ನೃತ್ಯ ತಂಡಗಳ ರಚನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Madhyama Bimba

ಪಂಚಾಯತ್ ನೌಕಕರ ಮುಷ್ಕರ: ಜನಸೇವೆಯಲ್ಲಿ ವ್ಯತ್ಯಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More