ಕಾರ್ಕಳ: ಕೌಡೂರು ರಂಗನಪಲ್ಕೆಯಲ್ಲಿ ಅಮ್ಮ ಸಭಾಭವನ ‘ಕಲ್ಯಾಣ ಸಿಂಧೂರ ಉದ್ಘಾಟನೆಯು ಆ. 30ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ನೂತನ ಸಭಾಭವನವನ್ನು ಮಾತೃಶ್ರೀ ಶಾಂತ ಪೂಜಾರಿ ಉದ್ಘಾಟಿಸಲಿದ್ದಾರೆ. ಶಾಸಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ, ಪಳ್ಳಿ ಶ್ರೀ ಕ್ಷೇತ್ರ ಅಡಪಾಡಿ ಧರ್ಮದರ್ಶಿ ಪುಂಡಲೀಕ ನಾಯಕ್, ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ ಭಟ್, ಪಳ್ಳಿ ಮಂಗಲ್ದಿ ಮಠದ ಅರ್ಚಕರಾದ ಗಣಪತಿ ಭಟ್, ಮಾಜಿ ತಾ. ಪಂ. ಅಧ್ಯಕ್ಷರಾದ ವಿಕ್ರಮ್ ಹೆಗ್ಡೆ, ಬೈಲೂರು ಜಿ. ಪಂ. ಮಾಜಿ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾದ ಪ್ರಮಲ್ ಕುಮಾರ್, ಪಟ್ಟದ ಚಾವಡಿ ಎಲಿಯಾಳ ಇಲ್ಲಿಯ ಜೀವನ್ ಮಾಡ, ಉದ್ಯಮಿ ಆಕಾಶ್ ಶೆಟ್ಟಿ, ರಂಗನಪಲ್ಕೆ ಭಾಗವಹಿಸಲಿದ್ದಾರೆ.
ಉದ್ಘಾಟನೆಯ ಪ್ರಯುಕ್ತ ಬೆಳಿಗ್ಗೆ 11.30ರಿಂದ ಕಲರ್ಸ್ ಕನ್ನಡ ವಾಹಿನಿಯ ಎದೆತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಮತ್ತು ಬಳಗದವರಿಂದ ಸಂಗೀತ ರಸ ಮಂಜರಿ ನಡೆಯಲಿದೆ.
ಸೌಲಭ್ಯಗಳು: ನೂತನ ಸಭಾಭವನದಲ್ಲಿ ಕೆಳಅಂತಸ್ತು ಹಾಗೂ ಪ್ರಥಮ ಮಹಡಿಯನ್ನು ಹೊಂದಿದೆ. ಮದುವೆ, ಉಪನಯನ ಇನ್ನಿತರ ಶುಭ ಸಮಾರಂಭಗಳಿಗೆ ಸಭಾಭವನವು ಲಭ್ಯವಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಪ್ರತ್ಯೇಕ ಊಟದ ಹಾಲ್ ಹಾಗೂ ಗ್ರಾಹಕರ ಅವಶ್ಯಕತೆ ಗನುಗುಣವಾಗಿ ಕ್ಯಾಟರಿಂಗ್ ವ್ಯವಸ್ಥೆ ಹಾಗೂ ಉತ್ತಮ ಸೇವೆ ನೀಡಲಾಗುವುದು ಎಂದು ಸಭಾಭವನದ ಮಾಲಕರಾದ ಜಯಾನಂದ ಅಮೀನ್ ತಿಳಿಸಿದ್ದಾರೆ.
