ಕಾರ್ಕಳ

ಪರಂಪರಾ ವಿವಿಧೋದ್ದೇಶ ಸಹಕಾರ ಸಂಘ (ನಿ) ಕಾರ್ಕಳ- 15ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ

ಕಾರ್ಕಳ: ಪರಂಪರಾ ವಿವಿಧೋದ್ದೇಶ ಸಹಕಾರ ಸಂಘ ನಿ. ಇದರ  15ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಅನಂತಶಯನ ಹೊಟೇಲ್ ಪ್ರಕಾಶ್ ಇದರ ಸಂಭ್ರಮ ಸಭಾಭವನದಲ್ಲಿ ಅ. 29ರಂದು ಜರಗಿತು.

ಸಂಘದ ಅಧ್ಯಕ್ಷರಾದ ನವೀನ್‌ಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಕಳೆದ 13 ವರ್ಷಗಳಿಂದ ನಿರಂತರ ಲಾಭ ಮಾಡುತ್ತಿದ್ದು ಈ ವರ್ಷ ಕೂಡಾ ಲಾಭಾಂಶದಲ್ಲಿ 21.69%ಏರಿಕೆಯಾಗಿದ್ದು ಸದಸ್ಯರಿಗೆ 14% ಪ್ರತಿಶತ ಡಿವಿಡೆಂಟ್ ಘೋಷಿಸಲಾಗಿದೆ ಎಂದರು.
ಕಳೆದ 15 ವರ್ಷಗಳಿಂದ ಎಲ್ಲಾ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಸಹಾಯವಾಗಲು ಎಲ್ಲಾ ಸೌಲಭ್ಯಗಳನ್ನು ಕಡಿಮೆ ಬಡ್ಡಿದರದಲ್ಲಿ ಸಂಘದ ಮುಖೇನ ಒದಗಿಸಿ ರೈತರ ಎಲ್ಲಾ ಅಗತ್ಯಗಳಿಗೆ ಸ್ಪಂದಿಸಿ ಅವರ ಅಭಿವೃದ್ಧಿಯೇ ಸಂಘದ ಧ್ಯೇಯ ಎಂದು ತಿಳಿಸಿದರು.

ಸಂಘದ ವತಿಯಿಂದ ಸದಸ್ಯರೂಬ್ಬರ ಮಗಳ ವಿದ್ಯಾಬ್ಯಾಸಕ್ಕಾಗಿ ಪ್ರತಿಭಾವಂತೆ ವಿದ್ಯಾರ್ಥಿನಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.. ಮತ್ತು ಸದಸ್ಯರಾದ ಇಂಜಿನಿಯರ್ ಸಂತೋಷ್ ಕುಮಾರ್ ಶೇಟ್ ಇವರು ಕಾರ್ಬನ್ ಕ್ರೇಡಿಟ್ ಇದರ ಬಗ್ಗೆ ಮಾಹಿತಿ ನಿಡಿದರು ಇದು ಪರಿಸರದ ಜಾಗತಿಕ ತಾಪಮಾನ ಮತ್ತು ವಾಯುಮಾಲಿನ್ಯವನ್ನು ನಿಯಂತ್ರಿಸುವುದು ಇದರ ಮುಖ್ಯ ಗುರಿ ಎಂದರು.

ಸಂಘದ ಹಿರಿಯ ನಿರ್ದೇಶಕರು ಹಾಗೂ ಔಷಧೀಯ ಸಸ್ಯಗಳ ತಜ್ಞಾರಾದ ಸಸ್ಯಶಾಮಲಾ ದಿನೇಶ್ ನಾಯಕ್ ರವರು ವಿವಿದ ಸಸ್ಯಗಳ ವಿನಿಯೋಗದ ಬಗ್ಗೆ ಮಾಹಿತಿ ನೀಡಿದರು. ಸಂಘದ ವತಿಯಿಂದ ಉಪಸ್ಥಿತರಿದ್ದ ಎಲ್ಲಾ ಸದಸ್ಯರಿಗೆ ಉಚಿತವಾಗಿ ಕಾರ್ಲ ಕಜೆ ಅಕ್ಕಿ ಸಣ್ಣ ಚೀಲದಲ್ಲಿ ವಿತರಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಿರ್ದೇಶಕರಾದ ಜಯರಾಮ ಸಾಲ್ಯಾನ್, ಎಮ್. ದಿನೇಶ್ ನಾಯಕ್, ಮಮತಾ. ಆರ್ ಶೆಟ್ಟಿ, ಅರುಣ್ ಕುಮಾರ್, , ಕೆ ಪದ್ಮನಾಭ ಭಂಡಾರಿ ಉಪಸ್ಥಿತರಿದ್ದರು.

2025-26ನೇ ಸಾಲಿನ ವರದಿಯನ್ನು ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅಕ್ಷಯ್ ಜೈನ್ ಮಂಡಿಸಿದರು. ನಿರ್ದೇಶಕರಾದ ಪ್ರವೀಣ್ ಸಾಲ್ಯಾನ್ 2025-26ನೇ ಸಾಲಿನ ಅಂದಾಜು ಬಜೆಟನ್ನು ಸಭೆಗೆ ಮಂಡನೆ ಮಾಡಿದರು.
ನಿರ್ದೇಶಕರಾದ ಎ ಮೋಹನ್ ಪಡಿವಾಳ್ ರವರು ಸಂಘದ ಉಪನಿಬಂಧನೆ ತಿದ್ದು ಪಡಿ ವಿಷಯವನ್ನು ಸದಸ್ಯರ ಅನುಮೋದನೆಗಾಗಿ ಮುಂದಿಟ್ಟರು. ನಿರ್ದೇಶಕರಾದ ಕೆ. ಮೋಹನದಾಸ ಅಡ್ಯಂತಾಯ ರವರು ಸಂಘವು 2025-26 ನೇ ಸಾಲಿನ ಲೆಕ್ಕಪರಿಶೋಧನಾ ವರ್ಗಿಕರಣ “ಎ” ಲಭಿಸಿರುತ್ತದೆ ಎಂದು ತಿಳಿಸಿ ನಿವ್ವಳ ಲಾಭ ಹಂಚಿಕೆಯನ್ನು ಸಭೆಯಲ್ಲಿ ಮಂಡಿಸಿದರು.
ಸಂಘದ ಉಪಾಧ್ಯಕ್ಷರಾದ ಪಿ ಅಭಯ್ ಕುಮಾರ್ ರವರು ಸದಸ್ಯರೆಲ್ಲರನ್ನು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನಿರ್ದೇಶಕರಾದ ಪ್ರವೀಣ್ ಕುಮಾರ್ ಗುರ್ಮೆ ಧನ್ಯವಾದಗಳನಿತ್ತರು. ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

Related posts

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭ

Madhyama Bimba

ಕ್ರೈಸ್ಟ್‌ಕಿಂಗ್ ಅಥ್ಲೆಟಿಕ್ಸ್‌ನಲ್ಲಿ ಅಭಿಷ್ ಮತ್ತು ಇಝಾ ಇಕ್ಬಾಲ್ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Madhyama Bimba

ಬೆಳ್ಮಣ್ ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More