ಕಾರ್ಕಳಹೆಬ್ರಿ

ಅ. 20-21ರಂದು ಅಜೆಕಾರು ದಸರಾ

ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಅಜೆಕಾರು ಇದರ ವತಿಯಿಂದ ಅ. 20 ಮತ್ತು 21ರಂದು ಡಾ. ಸಂತೋಷ್ ಕುಮಾರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಶ್ರೀ ಶಾರದ ಮಹೋತ್ಸವವು ಅಜೆಕಾರು ಪೇಟೆಯಲ್ಲಿ ವೇದಮೂರ್ತಿ ಅರುಣ್ ಭಟ್ ನೇತೃತ್ವದಲ್ಲಿ ನಡೆಯಲಿದೆ.


ಅ. 20ರಂದು ಘಂ. 8.30ರಿಂದ ದೇವತಾ ಪ್ರಾರ್ಥನೆ, ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆ, ಗಣಹೋಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 1.00ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಸಹಭೋಜನ ಮತ್ತು ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ, ’ಸ್ವರ ಸಮರ್ಪಣೆ’ ದಿವ್ಯ ನಿಧಿ ರೈ ಎರುಂಬು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಇವರಿಂದ “ಮಂದಾರ್ತಿ ಮಾದೇವಿ” ನೃತ್ಯ ವೈಭವ ಮತ್ತು ನೃತ್ಯ ರೂಪಕ, ಸಂಜೆ ಗಂಟೆ 07.00ಕ್ಕೆ ಆರೋಗ್ಯನಿಧಿ ವಿತರಣೆ ಮತ್ತು ಸಭಾ ಕಾರ್ಯಕ್ರಮ, ಗಂಟೆ 8.30 ರಿಂದ ರಂಗಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 09.00ರಿಂದ ಸಮಾಜ ರತ್ನ ಲೀಲಾಧರ್ ಶೆಟ್ಟಿ ಸಾರಥ್ಯದ ಕಾಪು ರಂಗತರಂಗ ಕಲಾವಿದರಿಂದ ತುಳು ಹಾಸ್ಯಮಯ ಸಾಂಸರಿಕ ನಾಟಕ “ವಿಕ್ರಂ ವೇದ” ನಡೆಯಲಿದೆ.

ಅ.21ರಂದು ಪೂರ್ವಾಹ್ನ 08.30ಕ್ಕೆ ಪ್ರಾತಃ ಪೂಜೆ, ಪೂರ್ವಾಹ್ನ 09.00ಕ್ಕೆ “ಮಹಾಚಂಡಿಕಾಯಾಗ”, ವಾಹನ ಪೂಜೆ, ಛದ್ಮವೇಷ ಸ್ಪರ್ಧೆ, ನೃತ್ಯ ವೈವಿಧ್ಯ, ಅಪರಾಹ್ನ 01.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, 1.30ರಿಂದ ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್ ಕೋಟೇಶ್ವರ ಕುಂದಾಪುರ ಇವರಿಂದ “ನಾಟ್ಯ ವೈಭವ, ಅಪರಾಹ್ನ ಗಂಟೆ 3.00ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ, ಗಂಟೆ 4.00ರಿಂದ ವಿಸರ್ಜನಾ ಪೂಜೆ, ಮೆರವಣಿಗೆಗೆ ಚಾಲನೆ, ಅಜೆಕಾರು ಪೇಟೆಯಿಂದ ಭವ್ಯ ವೈಭವದ ಪುರಮೆರವಣಿಗೆ, ಎಣ್ಣೆಹೊಳೆಯಲ್ಲಿ ಸೀಯಾಳ ಅಭಿಷೇಕ ಮತ್ತು ಜಲಸ್ಥಂಭನ ನಡೆಯಲಿದೆ.

Related posts

ಪ್ರಜ್ಞಾ ಯುವತಿ ಮಂಡಲ ಅಧ್ಯಕ್ಷರಾಗಿ ಸುನಿತಾ ಹೆಗ್ಡೆ

Madhyama Bimba

ಸರ್ಕಾರದ ಜನವಿರೋಧಿ ಧೋರಣೆಗಳನ್ನು ಜನಸಾಮಾನ್ಯರು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? – ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ

Madhyama Bimba

ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ- ಶೇ.65 ಬೋನಸ್ – ಶೇ.15ಡಿವಿಡೆಂಟ್ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More