ಕಾರ್ಕಳಹೆಬ್ರಿ

ಪಡುಕುಡೂರು ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಯಕ್ಷಗಾನ ತರಭೇತಿ ಉದ್ಘಾಟನೆ

ಹೆಬ್ರಿ : ಶತಮಾನೋತ್ಸವ ಸಂಭ್ರಮದಲ್ಲಿರುವ ಹೆಬ್ರಿ ತಾಲ್ಲೂಕಿನ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿಧ್ಯಾರ್ಥಿಗಳ ತಂಡದ ಯಕ್ಷಗಾನ ತರಭೇತಿಯನ್ನು ಮುಂಬೈ ಉದ್ಯಮಿ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಹರೀಶ್ ಶೆಟ್ಟಿ ಪಡುಪರ್ಕಳ ಉದ್ಘಾಟಿಸಿ ಶುಭಹಾರೈಸಿದರು.

ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಯಕ್ಷಗಾನ ಗುರು ತೆಂಕುತಿಟ್ಟು ಯಕ್ಷರಂಗದಲ್ಲಿ 43 ವರ್ಷಗಳ ಅನುಭವದ ಸತೀಶ್ ಮಡಿವಾಳ, ನಾರಾಯಣ ಆಚಾರ್ಯ ಗರ್ಧರಬೆಟ್ಟು ಮತ್ತು ಸಂತೋಷ ಶೆಟ್ಟಿ ನೇತ್ರತ್ವದಲ್ಲಿ ಯಕ್ಷಗಾನ ತಂಡವನ್ನು ರಚಿಸಲಾಯಿತು.

ಶತಮಾನೋತ್ಸವ ಸಮಿತಿಯಯ ಸಂಚಾಲಕ ಪ್ರಸನ್ನ ಶೆಟ್ಟಿ ಜಯಲೀಲಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ್ ಪೂಜಾರಿ.ಎಸ್, ಪ್ರಮುಖರಾದ ಸಂತೋಷ ಆಚಾರ್ಯ, ಶೃತಿ ಪೂಜಾರಿ, ಸವಿತಾ ಶೆಟ್ಟಿ, ಸಂತೋಷ ಶೆಟ್ಟಿ, ನಾರಾಯಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳಾದ ದೀಕ್ಷಾ,ಅವಿನಾಶ್,ಸಮೃದ್ಧಿ, ಆಯುಷಿ, ಅದಿತಿ ಪ್ರಾರ್ಥಿಸಿದರು. ಹರೀಶ ಪೂಜಾರಿ ಎಸ್ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

Related posts

ಸನ್‌ಮಾರ್ಗ್ ಎನರ್ಜಿಸ್ ಕಾರ್ಕಳದಲ್ಲಿ ಶುಭಾರಂಭ

Madhyama Bimba

114 ವರ್ಷಗಳ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕಿನಿಂದ 1,535 ಕೋಟಿ ರೂಪಾಯಿ ವ್ಯವಹಾರ ; 22 ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

Madhyama Bimba

ಬೈಲೂರು: ಬಸ್ರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More