ಮೂಡುಬಿದಿರೆ

ಪಣಪಿಲದಲ್ಲಿ ಕಮಲಾವತಿ ಅಮ್ಮ ಆಟದ ಮೈದಾನ ಉದ್ಘಾಟನೆ, ಕ್ರಿಕೆಟ್ ಪಂದ್ಯಾಟ

ದರೆಗುಡ್ಡೆ ಗ್ರಾಮ ಪಂಚಾಯತು ವ್ಯಾಪ್ತಿಯ ಪಣಪಿಲದ ಭಂಡಾರ್ ತಪ್ಪು ಎಂಬಲ್ಲಿ ಜ್ವಾಲಿ ಗೆಳೆಯರ ಬಳಗದ ನೇತೃತ್ವದಲ್ಲಿ ನೂತನವಾಗಿ ನಿಮಿ೯ಸಿರುವ ‘ಕಮಲಾವತಿ ಅಮ್ಮ’ ಕ್ರೀಡಾಂಗಣದ ಉದ್ಘಾಟನೆ ಮತ್ತು ಮೈದಾನ ಪ್ರಾರಂಭೋತ್ಸವ ಅಂಗವಾಗಿ ಕ್ರಿಕೆಟ್ ಪಂದ್ಯಾಟ ಆಗಸ್ಟ್30 ರಂದು ನಡೆಯಿತು.

ಪಣಪಿಲ ಅರಮನೆಯ ಶ್ರೀವಮ೯ ಶೆಟ್ಟಿಯವರು ಕ್ರೀಡಾಂಗಣವನ್ನು ಉದ್ಘಾಟಿಸಿ ಶುಭ ಕೋರಿದರು.

ದರೆಗುಡ್ಡೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಶೆಟ್ಟಿ ಬೇಲೊಟ್ಟು, ತುಳಸಿ ಮೂಲ್ಯ, ವಿನೋದರ್ ಪೂಜಾರಿ, ಮಾಜಿ ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ಮಾಜಿ ಸದಸ್ಯ ಶ್ರೀಧರ್ ಕೋಟ್ಯಾನ್, ಕರಾವಳಿ ಕೇಸರಿ ಸ್ಥಾಪಕಾಧ್ಯಕ್ಷ ಸಮಿತ್ ರಾಜ್, ಕೋಟಿ-ಚೆನ್ನಯ ಯುವಶಕ್ತಿ ಅಳಿಯೂರು ಇದರ ಸ್ಥಾಪಕಾಧ್ಯಕ್ಷ ವಿಶ್ವನಾಥ ಕೋಟ್ಯಾನ್ ಹನ್ನೇರ್, ವಕೀಲ ಭರತ್ ರಾಜ್ ಜೈನ್, ಉದ್ಯಮಿ ಹೇಮಾ ಕೆ. ಪೂಜಾರಿ, ಊರ ಹಿರಿಯರು ಭಾಗವಹಿಸಿ ಶುಭಹಾರೈಸಿದರು.
ಜ್ವಾಲಿ ಗೆಳೆಯರ ಬಳಗದ ಉದಯ ಕೋಟ್ಯಾನ್ ಸ್ವಾಗತಿಸಿದರು. ಅಧ್ಯಕ್ಷ ಪ್ರಸನ್ನ ಕೋಟ್ಯಾನ್ ಕಾಯ೯ಕ್ರಮ ನಿರೂಪಿಸಿ ಅರುಣ್ ಸಾಲ್ಯಾನ್ ವಂದಿಸಿದರು.

Related posts

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸತ್ತಿನ ಉದ್ಘಾಟನೆ ಮತ್ತು ಪದಗ್ರಹಣ

Madhyama Bimba

ಬೆಳುವಾಯಿ ಮೀನಯ್ಯ ಪೂಜಾರಿ ಇನ್ನಿಲ್ಲ

Madhyama Bimba

ಜುಲೈ 26 ರಂದು ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಲಾಸಿಕ್ ಲೇಸರ್ ಕಣ್ಣಿನ ತಪಾಸಣಾ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More