ಕಾರ್ಕಳ

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭ

ಕಾರ್ಕಳ: ಕಾರ್ಕಳ ಜ್ಞಾನಸುಧಾಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ ಗಣಿತ ನಗರದಲ್ಲಿ 2026-27ನೇ ಸಾಲಿನ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭವು ಜರಗಿತು.


ಮುಖ್ಯ ಅತಿಥಿ ಡಿವೈಎಸ್‌ಪಿ ಎ.ಸ್ ವಿಜಯ ಪ್ರಸಾದ್ ಇವರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು ವಿದ್ಯೆ ಎಂದರೆ ತಪಸ್ಸು ಇದ್ದ ಹಾಗೆ. ಶಿಸ್ತಿನ ಇನ್ನೊಂದು ಭಾಗವೇ ವಿದ್ಯಾರ್ಥಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ಆದ್ದರಿಂದ ವಿದ್ಯಾರ್ಥಿಗಳು ಕಾನೂನು, ನಿಯಮ, ಸಂಪ್ರದಾಯಗಳನ್ನು ಅಳವಡಿಸಿಕೊಂಡು ಶಿಸ್ತು ಬದ್ಧರಾಗಿರಬೇಕು. ದೇಶಾದ್ಯಂತ ಹೆಸರು ಮಾಡುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶಗಳನ್ನು ನೀಡುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕಿವಿ ಮಾತುಗಳನ್ನು ಹೇಳಿದರು.

ನಶಾ ಮುಕ್ತ ಭಾರತ ಮತ್ತು ಸೈಬರ್ ಕ್ರೈಮ್ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಶಿವಕುಮಾರ್ ಮಾತನಾಡಿ ಮದ್ಯಪಾನ, ತಂಬಾಕು ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ನಶೆಯಿಂದ ದೂರವಿದ್ದು, ತಮ್ಮ ಕುಟುಂಬ ಹಾಗೂ ಸಮಾಜದಲ್ಲಿಯೂ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.

ಶಾಲಾ ಸಂಸತ್ತಿನ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪ ಪ್ರಾಂಶುಪಾಲೆಯಾಗಿರುವ ವಾಣಿ.ಕೆ. ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ದಿನೇಶ್ ಎಂ. ಕೊಡವೂರು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮಹಿಳಾ ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ಸೀಮಾ ಅಂಜು, ಶಾಲಾ ನಾಯಕ ಪ್ರದ್ಯೋತ್ ಪ್ರಮಲ್, ಉಪನಾಯಕಿ ಸಿನಿ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಉಪ ಪ್ರಾಂಶುಪಾಲರಾದ ಸಾಹಿತ್ಯ, ಡೀನ್ ಸ್ಟೂಡೆಂಟ್ಸ್ ಅಫೈರ್ ಶಕುಂತಳಾ ಎಂ.ಸುವರ್ಣ ಉಪಸ್ಥಿತರಿದ್ದರು.

ಶಾಲಾ ಸಂಸತ್ತಿಗೆ ರಿತ್ವಿಕ್ ಶೆಟ್ಟಿ, ಧ್ರುವಿತಾ ಜಿ. ಡಿ. ವರ್ಣ ಭಟ್, ಅನ್ಶಿ ಪ್ರಸಾದ್ ಸುವರ್ಣ, ಅನ್ವಿ ಶೆಟ್ಟಿ, ಶಾರ್ವಿ ಹೆಗ್ಡೆ, ಅನ್ವಿತ್ ಶೆಟ್ಟಿ, ಪಾಯಲ್ ಗೌಡ, ಅಹನ್ ಬಲ್ಲಾಳ್, ಅದೃಷ್ಟ್ ವೈ ಶೆಟ್ಟಿ, ಸುಹಾನಿ ಕುಡ್ವ, ಶ್ರೇಯಾ, ಶ್ಲೋಕ ಸಂದೇಶ್ ಶೆಟ್ಟಿ, ಅವನಿ ಪೈ, ಇಶಾ ಪಿ ಶೆಟ್ಟಿ, ಕಾರ್ತಿಕ್ ಶೆಟ್ಟಿಗಾರ್ ಆಯ್ಕೆಗೊಂಡರು.
ಯಶ್ವಿ ಬಿ.ಎಚ್ ಕಾರ್ಯಕ್ರಮ ನಿರೂಪಿಸಿದರು. ವಿ. ತನುಜ್ಞಾ ಪ್ರಾರ್ಥಿಸಿ, ತೀರ್ಥ್ ಶೆಟ್ಟಿ ಸ್ವಾಗತಿಸಿದರು. ಆಯಿಶಾ ನಿಫಾ ವಂದಿಸಿದರು.

Related posts

ಶಿಲ್ಪಿ ಶ್ಯಾಮರಾಯ ಆಚಾರ್ಯರ ಧರ್ಮಪತ್ನಿ ಸುಮಿತ್ರಾ ನಿಧನ

Madhyama Bimba

ಕಾರ್ಕಳದ ಎಸ್‌ವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ನಶಾ ಮುಕ್ತ ಭಾರತ” ಕಾರ್ಯಕ್ರಮ

Madhyama Bimba

ಸ್ವಯಂ ಸೇವಾ ಗೃಹರಕ್ಷಕರ ಹುದ್ದೆ : ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More