ಕಾರ್ಕಳಹೆಬ್ರಿ

ಸೆ. 4ರಂದು ಕೆರ್ವಾಶೆಯಲ್ಲಿ ಮೊಸರು ಕುಡಿಕೆ ಮತ್ತು ಭಜನಾ ಕಾರ್ಯಕ್ರಮ

ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಪಾಲ್ದಾಕ್ಯಾರು ಕೆರ್ವಾಶೆ ವತಿಯಿಂದ 26ನೇ ವರ್ಷದ ಮೊಸರು ಕುಡಿಕೆ ಮತ್ತು ಭಜನಾ ಕಾರ್ಯಕ್ರಮವು ಸೆ. 04 ಶುಕ್ರವಾರದಂದು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಲ್ಲಿ ಜರಗಲಿದೆ.

ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 8.30೦ಕ್ಕೆ ಆಟೋಟ ಸ್ಪರ್ಧೆಗಳ ಉದ್ಘಾಟನೆ, ಗಂಟೆ 9.00ಕ್ಕೆ ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆ, ಸಾಯಂಕಾಲ 4.00 ಗಂಟೆಗೆ ಮೊಸರು ಕುಡಿಕೆ, ಸಂಜೆ 6.30ರಿಂದ ಸ್ಥಳೀಯರಿಂದ ಭಜನಾ ಕಾರ್ಯಕ್ರಮ, ಗಂಟೆ 7.00ರಿಂದ ಶ್ರೀ ಶಾರದಾಂಬಾ ಭಜನಾ ಮಂಡಳಿ, ಹನಿಮುಗ್ಗೇರ್ಕಳ ಭಜನಾ ಮಂಡಳಿ, ಕೆರ್ವಾಶೆ ಪಿಲಿಚಂಡಿಗುಡ್ಡೆ ಶ್ರೀ ವ್ಯಾಘ್ರಚಾಮುಂಡಿ ಭಜನಾ ಮಂಡಳಿ, ಶಿರ್ಲಾಲು ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ಜರಗಲಿದೆ.

ರಾತ್ರಿ 8.30ಕ್ಕೆ ಧಾರ್ಮಿಕ ಸಭೆ, ಬಹುಮಾನ ವಿತರಣೆ, ಪ್ರತಿಭಾವಂತ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ, ಗಂಟೆ 9.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ.

Related posts

ರೋಟರಿ ಕ್ಲಬ್ ಕಾರ್ಕಳ: ಕೃತಜ್ಞತಾ ಸಮಾರಂಭ

Madhyama Bimba

ಹೆಬ್ರಿ: ನೇಣು ಬಿಗಿದು ಆತ್ಮಹತ್ಯೆ

Madhyama Bimba

ಕಾರ್ಕಳ ತಾಲೂಕು ಗುಡಿಗಾರ ಸಮಾಜ ಸಂಘ ಕೆರ್ವಾಶೆ ವತಿಯಿಂದ ಗಿಡ ನೆಡುವ ಹಾಗೂ ಸ್ವಚ್ಛತಾ  ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More