ಕಾರ್ಕಳಹೆಬ್ರಿ

ಗೋವಿಗಾಗಿ ಮೇವು – ಗೋಸೇವೆಗೆ ಕೈಜೋಡಿಸಿದ ಕುಕ್ಕುಂದೂರು ಫ್ರೆಂಡ್ಸ್

ಸ್ವಚ್ಛ ಕಾರ್ಕಳ ಬ್ರಿಗೇಡ್ ಆಯೋಜಿಸಿದ “ಗೋವಿಗಾಗಿ ಮೇವು” ಕಾರ್ಯಕ್ರಮದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.), ಕುಕ್ಕುಂದೂರು-ಮುಂಬೈ ಸಂಘದ ಸದಸ್ಯರು ಪಾಲ್ಗೊಂಡು ಸೆ. 06ರಂದು ಕುಕ್ಕುಂದೂರು ತೋಟಗಾರಿಕೆ ಇಲಾಖೆಯ ತೋಟದಲ್ಲಿ ಹುಲ್ಲು ಕಟಾವು ಮಾಡಿ ಗೋಶಾಲೆಗೆ ನೀಡುವ ಮೂಲಕ ಗೋಸೇವೆಗೆ ಕೈಜೋಡಿಸಿದರು.

ಸ್ವಚ್ಛ ಕಾರ್ಕಳ ಬ್ರಿಗೆಡ್ ತಂಡದ ಸದಸ್ಯರೊಂದಿಗೆ ಕುಕ್ಕುಂದೂರು ಫ್ರೆಂಡ್ಸ್ ಸಂಘದ ಸದಸ್ಯರು ಶ್ರಮದಾನದಲ್ಲಿ ತೊಡಗಿಸಿಕೊಂಡು ಹುಲ್ಲು ಕಟಾವು ಮಾಡಿ ಸಂಗ್ರಹಿಸಿ ಒಂದು ಲೋಡು ಮೇವು ಹೆಬ್ರಿಯ ಗೋಶಾಲೆಗೆ ಸಾಗಿಸಲಾಯಿತು.

“ಗೋಸೇವೆ ಎನ್ನುವುದು ಕೇವಲ ಧಾರ್ಮಿಕ ಕಾರ್ಯವಲ್ಲ. ಅದು ಜೀವಿಗಳ ಮೇಲಿನ ಕರುಣೆ, ಪ್ರೀತಿ ಮತ್ತು ಮಾನವೀಯತೆಯ ಪ್ರತೀಕ” ಎಂಬ ಆಶಯದೊಂದಿಗೆ ನಡೆದ ಈ ಸೇವಾ ಕಾರ್ಯವು ಪರಿಸರ ಹಾಗೂ ಜೀವ ಸಂರಕ್ಷಣೆಯ ಮಹತ್ವವನ್ನೂ ಸಾರಿತು.

ಕುಕ್ಕುಂದೂರು ಫ್ರೆಂಡ್ಸ್ ಸಂಘದ ಸದಸ್ಯರು ಸಾಮಾಜಿಕ ಹಾಗೂ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಪ್ರತಿ ವರ್ಷ ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರೊಂದಿಗೆ ಸೇರಿ ಗೋಸೇವೆಯ ಮೂಲಕವೂ ಸೇವೆಯೇ ಶ್ರೇಷ್ಠ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.

Related posts

ಕಾರ್ಕಳ: ಕುಕ್ಕುಂದೂರಿನಲ್ಲಿ ಅಕ್ರಮ ಶಿಲೆ ಕಲ್ಲು ಗಣಿಗಾರಿಕೆ ಪೊಲೀಸ್ ದಾಳಿ- ನಿರೀಕ್ಷಣಾ ಜಾಮೀನು ಮಂಜೂರು

Madhyama Bimba

ಕ್ರೈಸ್ಟ್‌ಕಿಂಗ್: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಆರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Madhyama Bimba

ಕ್ರಿಯೇಟಿವ್ ಗುರುದೇವೋಭವ: ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಡಾ. ಹರೇಕಳ ಹಾಜಬ್ಬ ಭಾಗಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More