ಮೂಡುಬಿದಿರೆ

ಡಾ. ರಾಮಕೃಷ್ಣ ಆಚಾರ್ ಅವರಿಗೆ ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ ಪ್ರದಾನ

ಮೂಡುಬಿದಿರೆ ತಾಲೂಕಿನ ಪಡುಮೂರ್ನಾಡು ಬನ್ನಡ್ಕದಲ್ಲಿ ನಡೆಯುತ್ತಿರುವ 5ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಅಂತರಾಷ್ಟ್ರೀಯ ಉದ್ಯಮಿ ಎಸ್ ಕೆ ಎಫ್ ಇಂಡಿಯಾ ಪ್ರೈವೇಟ್ ಲಿ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಅವರಿಗೆ ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ ಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬನ್ನಡ್ಕದಲ್ಲಿ ತಾನು ಉದ್ಯಮವನ್ನು ಪ್ರಾರಂಭಿಸಿದ ನಂತರ ಗ್ರಾಮದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ತಿಳಿ ತಿಳಿಸಿದರು. ತನ್ನ ಕಂಪನಿಯ ಸಿ ಎಸ್ ಆರ್ ಫಂಡ್ ನಿಂದ ಪ್ರತಿವರ್ಷ ಸುಮಾರು 25 ಲಕ್ಷ ರೂಪಾಯಿ ಅಭಿವೃದ್ಧಿ ಕಾರ್ಯಗಳಿಗೆ ನೀಡಲು ಸಾಧ್ಯವಿದೆ. ಆದರೆ ಊರವರು ಈ ಬಗ್ಗೆ ಸಮಿತಿಯನ್ನು ರಚಿಸಿಕೊಂಡು ಮೊತ್ತವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬನ್ನಡ್ಕದಲ್ಲಿ ಸಂಜೀವಿನಿ ಗೋಧಾಮ ಮಾಡಿ ಏಳು ಸ್ಥರದ ಕೃಷಿ ಚಟುವಟಿಕೆಗಳನ್ನು ನಡೆಸುವುದಾಗಿ ತಿಳಿಸಿದರು. ಮೀನು, ಕುರಿ, ಕೋಳಿ, ಪಕ್ಷಿಗಳನ್ನು ಸಾಕೋದು, ಕಾಂಪೋಸ್ಟ್ ಗೊಬ್ಬರ ರಚಿಸಿ ಸಾವಯವ ಕೃಷಿಗೆ ಉತ್ತೇಜಿಸುವ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಧಾರ್ಮಿಕ ಕಾರ್ಯಗಳಿಂದ ಗ್ರಾಮದ ಅಭಿವೃದ್ಧಿಗೆ ಪ್ರೇರಕ ವಾಗುತ್ತದೆ ಎಂದು ಹೇಳಿದರು. ಶಾಸಕ ಉಮಾನಾಥ ಏ ಕೋಟ್ಯಾನ್ ಮಾತನಾಡಿ ದಸರಾ ಹಿಂದೂ ಸಮಾಜದ ಚೈತನ್ಯವಾಗಿದೆ ಎಂದರು.

ಬಿಜೆಪಿ ಮುಖಂಡ ಸುದರ್ಶನ ಎಂ ಮಾತನಾಡಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಹಾಗೂ ಕ್ರಿಯಾಶಕ್ತಿ ಮೂಲಕ ಶಾರದೋತ್ಸವದಂತಹ ಉತ್ಸವಗಳು ಮಾದರಿಯಾಗಿ ಮೂಡಿಬರುತ್ತಿದೆ ಎಂದು ಹೇಳಿದರು. ಉದ್ಯಮಿ ಶ್ರೀಪತಿ ಭಟ್ ಮಾತನಾಡಿ ಸಂಘಟನೆಯನ್ನು ಪರಂಪರೆಯಾಗಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಪಡುಮಾರ್ನಾಡು ಕೃಷಿಕ ರಮೇಶ್ ಶೆಟ್ಟಿ, ನ್ಯಾಯವಾದಿ ಚೇತನ್ ಕುಮಾರ್ ಶೆಟ್ಟಿ, ಉದ್ಯಮಿ ದೋಟ ಸುರೇಶ್ ಶೆಟ್ಟಿ, ಬೋಳ ವಿಶ್ವನಾಥ ಕಾಮತ್, ಶ್ರೀ ಕ್ಷೇತ್ರ ಬನ್ನಡ್ಕ ಅನುವಂಶಿಕ ಮೊಕ್ತೇಸರರು ಸುಕುಮಾರ ಬಲ್ಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾರದೋತ್ಸವ ಟ್ರಸ್ಟ್ ಅಧ್ಯಕ್ಷ ದಯಾನಂದ ಪೈ ಸಭಾಧ್ಯಕ್ಷತೆ ವಹಿಸಿದ್ದರು ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡು ವೇದಿಕೆಯಲ್ಲಿದ್ದರು. ನಿವೃತ್ತ ದೈಹಿಕ ಶಿಕ್ಷಕ ಕಿಶೋರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾರದೋತ್ಸವ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತ ರನ್ನು ಬಹುಮಾನದೊಂದಿಗೆ ಗೌರವಿಸಲಾಯಿತು.

Related posts

ರೋಟರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

Madhyama Bimba

ಅಮನ್ ಪ್ರಿಯಾಂಶ್ ಗೆ ಭಂಡಾರಿ ಸಂಘದಿಂದ ಸನ್ಮಾನ

Madhyama Bimba

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸತ್ತಿನ ಉದ್ಘಾಟನೆ ಮತ್ತು ಪದಗ್ರಹಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More