Blog

ಗೋ ಸೇವೆಗಾಗಿ ಕೈ ಜೋಡಿಸಿದ ಕುಕ್ಕುಂದೂರು ಫ್ರೆಂಡ್ಸ್

ಗೋವಿಗಾಗಿ ಮೇವು – ಗೋಸೇವೆಗೆ ಕೈಜೋಡಿಸಿದ ಕುಕ್ಕುಂದೂರು ಫ್ರೆಂಡ್ಸ್

 

ಸ್ವಚ್ಛ ಕಾರ್ಕಳ ಬ್ರಿಗೇಡ್ ಆಯೋಜಿಸಿದ “ಗೋವಿಗಾಗಿ ಮೇವು” ಕಾರ್ಯಕ್ರಮದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.), ಕುಕ್ಕುಂದೂರು–ಮುಂಬೈ ಸಂಘದ ಸದಸ್ಯರು ಪಾಲ್ಗೊಂಡು ದಿನಾಂಕ 06-09-2026 ರಂದು ಕುಕ್ಕುಂದೂರು ತೋಟಗಾರಿಕೆ ಇಲಾಖೆಯ ತೋಟದಲ್ಲಿ ಹುಲ್ಲು ಕಟಾವ್ ಮಾಡಿ ಗೋಶಾಲೆಗೆ ನೀಡುವ ಮೂಲಕ ಗೋಸೇವೆಗೆ ಅರ್ಥಪೂರ್ಣವಾಗಿ ಕೈಜೋಡಿಸಿದರು.

 

ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಸದಸ್ಯರೊಂದಿಗೆ ಕುಕ್ಕುಂದೂರು ಫ್ರೆಂಡ್ಸ್ ಸಂಘದ ಸದಸ್ಯರು ಶ್ರಮದಾನದಲ್ಲಿ ತೊಡಗಿಸಿಕೊಂಡು ಹುಲ್ಲು ಕಟಾವು ಮಾಡಿ ಸಂಗ್ರಹಿಸಿ ಒಂದು ಲೋಡು ಮೇವು ಹೆಬ್ರಿಯ ಗೋಶಾಲೆಗೆ ಸಾಗಿಸಲಾಯಿತು.

“ಗೋಸೇವೆ ಎನ್ನುವುದು ಕೇವಲ ಧಾರ್ಮಿಕ ಕಾರ್ಯವಲ್ಲ. ಅದು ಜೀವಿಗಳ ಮೇಲಿನ ಕರುಣೆ, ಪ್ರೀತಿ ಮತ್ತು ಮಾನವೀಯತೆಯ ಪ್ರತೀಕ” ಎಂಬ ಆಶಯದೊಂದಿಗೆ ನಡೆದ ಈ ಸೇವಾ ಕಾರ್ಯವು ಪರಿಸರ ಹಾಗೂ ಜೀವ ಸಂರಕ್ಷಣೆಯ ಮಹತ್ವವನ್ನೂ ಸಾರಿತು.

 

ಕುಕ್ಕುಂದೂರು ಫ್ರೆಂಡ್ಸ್ ಸಂಘದ ಸದಸ್ಯರು ಸಾಮಾಜಿಕ ಹಾಗೂ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಪ್ರತಿ ವರ್ಷ ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರೊಂದಿಗೆ ಸೇರಿ ಗೋಸೇವೆಯ ಮೂಲಕವೂ ಸೇವೆಯೇ ಶ್ರೇಷ್ಠ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.

Related posts

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್‌ಗೆ ’ಕೃಷ್ಣೋತ್ಸವ ಪ್ರಶಸ್ತಿ’ ಗೌರವ

Madhyama Bimba

ಕಟ್ಟಡದ ಕೆಲಸ ಮಾಡುತ್ತಿದ್ದ ಬಾಲಕ ಕೆಳಗೆ ಬಿದ್ದು ಸಾವು

Madhyama Bimba

ಆಗಸ್ಟ್ 7 ರಂದು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳಕ್ಕೆ ಚಾಲನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More