ಶ್ರೀ ರಾಮಪ್ಪ ಎಜುಕೇಶನ್ ಟ್ರಸ್ಟ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸೆ.03ರಂದು ಆಚರಿಸಲಾಯಿತು. ಈ ಪ್ರಯುಕ್ತ ಪುಟಾಣಿ ಮಕ್ಕಳಿಗಾಗಿ ಮುದ್ದು ಕೃಷ್ಣ – ಮುದ್ದು ರಾಧೆ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶಾಲೆಯ ಹಿತೈಷಿ, ಹಳೆಯ ವಿದ್ಯಾರ್ಥಿ ಹಾಗೂ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀಧರ್ ಸುವರ್ಣ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ತಂಗಿ ಎಸ್. ಸುವರ್ಣ ಉಪಸ್ಥಿತರಿದ್ದರು.
ಕೃಷ್ಣ-ರಾಧೆ ವೇಷ ಸ್ಪರ್ಧೆಯಲ್ಲಿ ಶ್ರೀಮತಿ ಸೌಮ್ಯ ಅಶೋಕ್ ಕೋಟ್ಯಾನ್ ಮತ್ತು ಹಳೆಯ ವಿದ್ಯಾರ್ಥಿ ಶ್ರೀಮತಿ ಸಂಗೀತ ಸುಭಾಷ್ ತೀರ್ಪುಗಾರರಾಗಿದ್ದರು. ಜೊತೆಗೆ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆ ಪಠಣ ಮತ್ತು ಆಧ್ಯಾತ್ಮಿಕ ಚಿಂತನೆ ಸ್ಪರ್ಧೆಗಳು ಜರಗಿತು. ಶ್ರೀಮತಿ ಶಾಲಿನಿ ಮತ್ತು ಶ್ರೀಮತಿ ಚಂಪಾ ತೀರ್ಪುಗಾರರಾಗಿದ್ದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಹಳೆಯ ವಿದ್ಯಾರ್ಥಿ ರವೀಂದ್ರನಾಥ್ ಆಗಮಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಶಾಲಾ ಶಿಕ್ಷಕಿಯಾದ ಶ್ರೀಮತಿ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಚಂಪಾ ಸ್ವಾಗತಿಸಿದರು. ಸುಧಾಕರ್ ವಂದಿಸಿದರು.
