ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಪ್ರಥಮ ಮಹಡಿಗೆ ವಯೋವೃದ್ಧರು ಹಾಗೂ ವಿಶೇಷಚೇತನರು ತೆರಳಲು ಅನುಕೂಲವಾಗುವಂತೆ ನಿರ್ಮಿಸಲಾದ ಲಿಫ್ಟ್ ಸೌಲಭ್ಯ ಇದೀಗ ಕಾರ್ಯಸ್ಥಗಿತಗೊಳಸಿದೆ.
ಆಡಳಿತ ಸೌಧದ ಸುಂದರ ವಿನ್ಯಾಸಕ್ಕೆ ಕಳಶಪ್ರಾಯವಾಗಿ ಸ್ವಾಗತ ದ್ವಾರದ ಬಳಿಯೇ ಇರುವ ಲಿಫ್ಟ್ ಇದೀಗ ಕಾರ್ಯಸ್ಥಗಿತಗೊಳಿಸಿ ಹಲವು ತಿಂಗಳುಗಳೇ ಕಳೆದಿವೆ. ಈ ಸೌಧಕ್ಕೆ ಶಾಸಕರ ಕಛೇರಿ, ನೋಂದಣಿ ಕಚೇರಿ, ಸರ್ವೇ ಇಲಾಖೆಗಳಿಗೆ ತೆರಳಲು ಪ್ರಾಯಸ್ಥರು ಲಿಫ್ಟ್ ಕಾರ್ಯಸ್ಥಗಿತದಿಂದಾಗಿ ತುಂಬಾ ತೊಂದರೆ ಪಡುವಂತಾಗಿದೆ. ಈ ಬಗ್ಗೆ ಲಿಫ್ಟ್ ನಿರ್ವಹಣೆಗಾಗಿ ನೋಂದಣಿ ಇಲಾಖೆಗೆ ವಹಿಸಿಕೊಡಲಾಗಿದ್ದರೂ ಈ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಲಿಫ್ಟ್ ಕಾರ್ಯನಿರ್ವಹಣೆ ನಿಲ್ಲಿಸಿ ಹಲವು ತಿಂಗಳುಗಳನ್ನು ಕಂಡಿದೆ.
ಈ ಬಗ್ಗೆ ಈಗಾಗಲೇ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಜನಪ್ರತಿನಿಧಿಗಳು ಉಪನೊಂದಾವಣೆ ಕಚೇರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ಹಾಗಾಗಿ ಜನರ ನಿತ್ಯದ ಕಳಕಳಿಗೆ ಸ್ಪಂದಿಸದೆ ತಾಲೂಕು ಆಡಳಿತ ಸೌಧದ ಲಿಫ್ಟ್ ನಿದ್ರಾವಸ್ಥೆಗೆ ಜಾರಿದಂತಾಗಿದೆ.
