ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಾಮರಸ್ಯದ ಉತ್ಸವವಾಗಿ ಮೂಡಿಬಂದಿದೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ (ರಿ.) ಇದರ ಅಧ್ಯಕ್ಷ ನಾರಾಯಣ ಪಿ ಎಂ ಅಭಿಪ್ರಾಯಪಟ್ಟರು.

ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯುತ್ತಿರುವ 63ನೇ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂಡುಬಿದಿರೆ ಗಣೇಶೋತ್ಸವದಲ್ಲಿ ಸರ್ವಧರ್ಮೀಯರು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿ, ತಮ್ಮ ಕೊಡುಗೆಗಳನ್ನು ನೀಡಿರುವುದಾಗಿ ಅವರು ತಿಳಿಸಿದರು.
ಸ್ಟಾರ್ಟ್ಅಪ್ ಮೂಲಕ ರಾಷ್ಟ್ರದ ಗಮನ ಸೆಳೆದ ‘ಮಾ ವೇದಾಸ್’ ಸ್ಥಾಪಕಿ ಮೂಡುಬಿದಿರೆ ಎಸ್ ಕೆ ಎಫ್ ಸಂಸ್ಥೆಯ ಶ್ರೀಮತಿ ಅನುಷಾ ಪ್ರಜ್ವಲ್ ಆಚಾರ್ ಮತ್ತು ದ್ವಿತೀಯ ಪಿಯುಸಿಯಲ್ಲಿ ಪೂರ್ಣ ಅಂಕ ಸಾಧಿಸಿದ ದಿಶಾ ಪೂಜಾರಿ ಅವರನ್ನು ಶಾಲು ಫಲ ಪುಷ್ಪ ಸ್ಮರಣಿಕೆ ಸನ್ಮಾನ ದೊಂದಿಗೆ ಗೌರವಿಸಲಾಯಿತು.
ಉಪನ್ಯಾಸಕ ರಾಮ್ ಪ್ರಸಾದ್ ಕಾಂಚೋಡು ಮಾತನಾಡಿ ಗಣೇಶ ಸಾಮರಸ್ಯದ ಪ್ರತೀಕ, ಬುದ್ಧಿ ಪ್ರಚೋದಕ, ವಿಘ್ನ ನಾಶಕ, ವರದಾಯಕ ಎಂದು ಹೇಳಿದರು.
ಮೂಡುಬಿದೀರೆ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ , ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ, ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ., ಉಪಾಧ್ಯಕ್ಷರಾದ ಕೊರಗ ಶೆಟ್ಟಿ, ದಿವಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜಾರಾಮ್ ನಾಗರಕಟ್ಟೆ ಸ್ವಾಗತಿಸಿದರು. ಹನಿ ಪ್ರಾರ್ಥನೆಗೈದರು. ಹರೀಶ್ ಎಂ ಕೆ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
