ಮೂಡುಬಿದಿರೆ

37 ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2026-ಆಳ್ವಾಸ್‌ಗೆ  26 ಪದಕದೊಂದಿಗೆ 05 ನೂತನ ಕೂಟ ದಾಖಲೆ

ಮೂಡುಬಿದಿರೆ: ಪಾಂಡಿಚೇರಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್‌ನ ಕ್ರೀಡಾಪಟುಗಳು 12  ಚಿನ್ನ, 05 ಬೆಳ್ಳಿ ಹಾಗೂ 09 ಕಂಚು ಒಟ್ಟು 26 ಪದಕದೊಂದಿಗೆ 05 ನೂತನ ಕೂಟ ದಾಖಲೆಯನ್ನು ಮಾಡಿರುತ್ತಾರೆ.

ಫಲಿತಾಂಶ :
ಬಾಲಕರ ವಿಭಾಗದಲ್ಲಿ : ಸುಭಾಷ್ ಆರ್ – ತ್ರಯತ್ಲಾನ್ ಸಿ (ತೃತೀಯ), ನಿತಿನ್ ಎಲ್ ಜಿ – ಚಕ್ರ ಎಸೆತ (ದ್ವಿತೀಯ), ಆರಂಭಮ್ ರಾಜು – 60ಮೀ (ಪ್ರಥಮ), 80ಮೀ ಹರ್ಡಲ್ಸ್ (ಪ್ರಥಮ) (ನೂತನ ಕೂಟ ದಾಖಲೆ), ಹೆಚ್ ಮೈಲಾರಿ – ಚಕ್ರ ಎಸೆತ (ತೃತೀಯ), ಜಸ್ವೀನ್ ಥೋಮಸ್ -ಎತ್ತರ ಜಿಗಿತ (ದ್ವಿತೀಯ), ಆಕಾಶ್ ಹುಕ್ಕೇರಿ – ಮಿಡಲ್ ರಿಲೇ (ತೃತೀಯ), ಸಮರ್ಥ್ ಸಂಜೀವ್ ಕುಮಾರ್ – 1000ಮೀ (ತೃತೀಯ), ಸಾಹಿಲ್ – 100 ಮೀ (ದ್ವಿತೀಯ), ಮಿಡಲ್ ರಿಲೇ (ತೃತೀಯ), ನೋವಲ್ ಆರ್ ಪಿ- ಉದ್ದ ಜಿಗಿತ (ತೃತೀಯ), ಅಬ್ದುಲ್ ರಜಕ್ ಶಿಗ್ಗಾನ – ಹ್ಯಾಮರ್ ತ್ರೋ (ತೃತೀಯ).

ಬಾಲಕಿಯರ ವಿಭಾಗದಲ್ಲಿ : ಮೇಘಾ ಅಶೋಕ್ ಪೂಜಾರಿ – 600ಮೀ (ಪ್ರಥಮ) (ನೂತನ ಕೂಟ ದಾಖಲೆ), ಮಿಡಲ್ ರಿಲೆ (ಪ್ರಥಮ), ಬಾನವಿ ಪಿ ಎಸ್ – 400ಮೀ (ದ್ವಿತೀಯ), ಮಿಡಲ್ ರಿಲೆ (ಪ್ರಥಮ), ಭಗೀರಥಿ – 3ಕಿಮೀ ನಡಿಗೆ (ಪ್ರಥಮ), ನಾಗಿಣಿ – 1000ಮೀ (ಪ್ರಥಮ), ಮಿಡಲ್ ರಿಲೆ (ಪ್ರಥಮ), ಚರೀಷ್ಮಾ – 3000ಮೀ (ದ್ವಿತೀಯ), 5000ಮೀ (ತೃತೀಯ), ರೀತುಶ್ರೀ -400ಮೀ (ತೃತೀಯ), 4*400ಮೀ ರಿಲೇ (ಪ್ರಥಮ), ತಮನ್ನ – 5000ಮೀ (ಪ್ರಥಮ) (ನೂತನ ಕೂಟ ದಾಖಲೆ), 1500 ಮೀ (ಪ್ರಥಮ) (ನೂತನ ಕೂಟ ದಾಖಲೆ), ನಿರಂಜನ – 5 ಕಿಮೀ ನಡಿಗೆ (ಪ್ರಥಮ) (ನೂತನ ಕೂಟ ದಾಖಲೆ)

ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Related posts

ಎಸ್‌ಕೆಪಿಎ ಮೂಡುಬಿದಿರೆ ವಲಯದ 16ನೇ ವಾರ್ಷಿಕ ಸಭೆ

Madhyama Bimba

ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕುಮಾರ್ ಪೂಜಾರಿ

Madhyama Bimba

ವಾಣಿ ವಿಲಾಸ ಶಾಲೆಯಲ್ಲಿ ಪರಿಸರ ದಿನ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More