ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಶಿರ್ತಾಡಿ ಇದರ 2025-2 6ನೇ ಸಾಲಿನ ವಾರ್ಷಿಕ ಮಹಾಸಭೆಯು ಶಿರ್ತಾಡಿ ಹೋಟೆಲ್ ಶ್ರೀ ಬ್ರಹ್ಮ ರೆಸಿಡೆನ್ಸಿ ಸಭಾಂಗಣದಲ್ಲಿ ಸೆ. 19ರಂದು ಸಂಘದ ಅಧ್ಯಕ್ಷರಾದ ಸತೀಶ್ ವಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
2012ರಲ್ಲಿ ಆರಂಭಗೊಂಡು ಶಿರ್ತಾ, ನಾರಾವಿ ಅಳದಂಗಡಿ ಗಳಲ್ಲಿ ಮೂರು ಶಾಖೆಗಳನ್ನು ಹೊಂದಿ 14 ವರ್ಷಗಳನ್ನು ಸಂದಿರುವ ಸಂಘವು ಪ್ರಸಕ್ತ ಸಾಲಿನಲ್ಲಿ 217.90 ಕೋಟಿ ರೂಪಾಯಿ ವ್ಯವಹಾರವನ್ನು ನಡೆಸಿದೆ. 22.31 ಕೋಟಿ ರೂ. ಠೇವಣಿ ಸಂಗ್ರಹಣೆಯಾಗಿದ್ದು, 2.92 ಕೋಟಿ ರೂಪಾಯಿ ಆದಾಯ ಗಳಿಸಿ 72.64 ಲಕ್ಷ ಲಾಭಗಳಿಸಿದೆ. ಪ್ರಸಕ್ತ ವರ್ಷ 19. 59 ಕೋಟಿ ರೂಪಾಯಿ ಸಾಲ ವಿತರಣೆ ನಡೆಸಲಾಗಿದ್ದು, ಶೇಕಡ 96.56 ವಸೂಲಾತಿ ಹೊಂದಿದೆ. ಸದಸ್ಯರಿಗೆ ಶೇಕಡ 11 ಲಾಭಾಂಶ ವಿತರಣೆಗೆ ನಿರ್ಧರಿಸಲಾಗಿದೆ. 26.14 ಕೋಟಿ ರೂಪಾಯಿ ದುಡಿಯುವ ಬಂಡವಾಳ ಹೊಂದಿದ್ದು, ಕಳೆದ ಸಾಲಿಗಿಂತ 5.78 ಕೋಟಿ ರೂಪಾಯಿ ವೃದ್ಧಿಯಾಗಿದೆ. ಸಂಘದ ಆರ್ಥಿಕ ಪ್ರಗತಿಯಿಂದಾಗಿ ಪ್ರಸಕ್ತ ವರ್ಷ ಕೇಂದ್ರ ಕಚೇರಿಗೆ 29953.5 ಚದರಡಿಯ ಸುಸಜ್ಜಿತ ಕಟ್ಟಡವನ್ನು 4.03 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವುದನ್ನು ಸಂಘದ ಅಧ್ಯಕ್ಷರಾದ ಸತೀಶ್ ವಿ. ಶೆಟ್ಟಿಯವರು ಸಭೆಗೆ ತಿಳಿಸಿದರು.
ಸಂಘದ ಉಪಾಧ್ಯಕ್ಷ ವಿನಯ್ ಹೆಗ್ಡೆ, ನಿರ್ದೇಶಕರಾದ ಎಸ್. ಪ್ರವೀಣ್ ಕುಮಾರ್, ಮಹಾವೀರ ಜೈನ್, ಮಹಾವೀರ ಮುದ್ಯ, ಲ್ಯಾನ್ಸಿ ಡೇಸ, ಫ್ರಾಂಕಿ ಎಲ್. ಪಿಂಟೊ, ರಕ್ಷಿತ್ ಆರ್., ಅರುಣ್ ಎನ್. ಶೆಟ್ಟಿ, ಸದಾನಂದ ಪೂಜಾರಿ, ಶ್ರೀಮತಿ ಬಬಿತಾ ಆರ್. ಶೆಟ್ಟಿ, ಶ್ರೀಮತಿ ಶಾರದಾ ಸುವರ್ಣ, ರವೀಂದ್ರ ಬಿ. ಅಮೀನ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಜೆ.ಕೆ. ವರದಿ ಮಂಡಿಸಿದರು. ಶಾಖಾ ವ್ಯವಸ್ಥಾಪಕ ಸತೀಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸರಿತಾ ಎಸ್ ಶೆಟ್ಟಿ, ಅಳದಂಗಡಿ ಶಾಖಾ ವ್ಯವಸ್ಥಾಪಕ ಪ್ರಜ್ವಲ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಸುಚೇತ ಆಚಾರ್ಯ ಪ್ರಾರ್ಥನೆಗೈದರು. ಹೊನ್ನಪ್ಪ ಸ್ವಾಗತಿಸಿ, ರಾಜವರ್ಮ ಜೈನ್ ಧನ್ಯವಾದವಿತ್ತರು.
