ಕಾರ್ಕಳ ತಾಲೂಕು ಪ್ರಭಾರ ತಹಶೀಲ್ದಾರ್ ಆಗಿ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಆದೇಶ ನೀಡಿದ್ದಾರೆ.
ಹೆಬ್ರಿ ತಹಶೀಲ್ದಾರ್ ಆಗಿರುವ ಇವರನ್ನು ಕಾರ್ಕಳಕ್ಕೆ ಸೆಪ್ಟೆಂಬರ್ 30ರ ವರೆಗೆ ಮಾತ್ರ ಹೆಚ್ಚುವರಿ ಆಗಿ ಈ ನೇಮಕ ಮಾಡಿ ಆದೇಶ ನೀಡಲಾಗಿದೆ.
ಈ ಹಿಂದಿನ ತಹಶೀಲ್ದಾರ್ ಪ್ರದೀಪ್ ಆರ್ ರವರಿಗೆ ವೈಯಕ್ತಿಕ ಕೆಲಸ ನಿಮಿತ್ತ ರಜೆ ಮಂಜೂರು ಮಾಡಲಾಗಿದೆ ಮತ್ತು ಈ ದಿನಗಳಲ್ಲಿ ಕೇಂದ್ರ ಸ್ಥಾನವನ್ನು ಬಿಡಲು ಅನುಮತಿ ನೀಡಲಾಗಿದೆ
