ಕಾರ್ಕಳ: ದೇಶ ಕಟ್ಟುವಲ್ಲಿ ಸಿವಿಲ್ ಎಂಜಿನಿಯರ್‌ಗಳು ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಸಂಸ್ಥೆಯ ಗೌರವ ಸಲಹೆಗಾರ ಎನ್.ಎಂ. ಹೆಗ್ಡೆ ಹೇಳಿದರು.
ಕಾರ್ಕಳ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್‌ನ ಪದಗ್ರಹಣ ಸಮಾರಂಭವು ಸೆ.20ರಂದು ಹೋಟೆಲ್ ಪ್ರಕಾಶ್‌ನ ಸಭಾಂಗಣದಲ್ಲಿ ನಡೆಯಿತು.
ಪದಗ್ರಹಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್. ಎಂ. ವಿಶ್ವೇಶ್ವರಯ್ಯ ಅವರ ಜೀವನ ನಮಗೆ ದಾರಿದೀಪವಾಗಿದೆ. ಸಂಘಟನೆಯ ಕೊರೆತೆಯಿಂದ ಇಂಜಿನಿಯರ್‍ಸ್‌ಗಳ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ವೃತ್ತಿಗೆ ಸಂಬಂಧಿಸಿದ ವಿವಿಧ ವಿಚಾರಗಳಲ್ಲಿ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಆದ್ದರಿಂದ ಸಂಘಟನೆಯನ್ನು ಬಲಪಡಿಸಿಕೊಳ್ಳುವಂತೆ ಅವರು ಹೇಳಿದರು. ಸಂಘಟನೆಯ ಮೂಲಕ ಸಿವಿಲ್ ಎಂಜಿನಿಯರ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಎಸಿಸಿಇ(ಐ) ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ಅವರು ಪ್ರಧಾನ ಭಾಷಣ ಮಾಡಿ ಎಸಿಸಿಇ(ಐ) ಸಂಘಟನೆಯಿಂದ ದೊರೆಯುವ ವಿವಿಧ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಕೇಶ್ ಅಮೀನ್ ಮಾತನಾಡಿ, ಪರಿಸರ ಸ್ನೇಹಿ ಹಾಗೂ ಜನಪರ ಯೋಜನೆಗಳೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಸದಸ್ಯರು ಸಹಕರಿಸುವಂತೆ ಮನವಿ ಮಾಡಿದರು. ಸಂಘಟನೆಯ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಉದ್ದೇಶವಿದೆ ಎಂದರು.
ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಯ ದಿನಕರ ಶೆಟ್ಟಿ ಹಾಗೂ ಗ್ರೇಟ್ ವೈಟ್ ಗ್ಲೋಬಲ್, ಮುಂಬೈನ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಅರುಣ್ ಕುಮಾರ್ ಜೈನ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
