ಜನಾಗ್ರಹ ಸಮಿತಿ, ಪರಶುರಾಮ ಥೀಮ್ ಪಾರ್ಕ್ ಯರ್ಲಪಾಡಿ ಬೈಲೂರು ಇವರ ವತಿಯಿಂದ ಬೈಲೂರು ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಮುಂದುವರಿಸುವಂತೆ ಮತ್ತು ಥೀಮ್ ಪಾರ್ಕ್ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶಮುಕ್ತ ಮಾಡುವಂತೆ ಆಗ್ರಹಿಸಿ ಜನಾಗ್ರಹ ಸಭೆಯ ಪೂರ್ವಾಭಾವಿ ಸಭೆಯು ಸೆ. 24ರಂದು ಸಂಜೆ 5.00 ಗಂಟೆಗೆ ಬೈಲೂರು ಮಾರಿಗುಡಿ ಸಭಾಂಗಣದಲ್ಲಿ ನಡೆಯಲಿದೆ.
ಈ ಬಗ್ಗೆ ಪ್ರಮುಖರ ಸಭೆಯು ಸೆ. 21ರಂದು ಬೈಲೂರು ಮಾರಿಗುಡಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಮಿತ್ ಶೆಟ್ಟಿ ಬೈಲೂರು, ಮಹೇಶ್ ಶೆಣೈ ಬೈಲೂರು, ರಮೇಶ್ ಕಿಣಿ ಬೈಲೂರು, ಪ್ರಶಾಂತ್ ಕುಮಾರ್ ಶೆಟ್ಟಿ ಬೈಲೂರು, ಸಚ್ಚಿದಾನಂದ ಶೆಟ್ಟಿ, ಉದಯ ಕುಮಾರ್ ಹೆಗ್ಡೆ, ಸಚ್ಚಿದಾನಂದ ಪ್ರಭು ಕಣಂಜಾರು, ಸುನೀಲ್ ಹೆಗ್ಡೆ ಗೋವಿಂದೂರು, ದಿಲೀಪ್ ಶೆಟ್ಟಿ ಬೈಲೂರು, ಸುರೇಶ್ ಶೆಟ್ಟಿ ಸಾಯಿರಾಂ, ರವೀಂದ್ರ ನಾಯಕ್ ನೀರೆ, ಮುಸ್ತಾಫ್ ಜಾರ್ಕಳ, ವಿನೂಪ್ ಹೆಗ್ಡೆ ಕಣಂಜಾರು, ಜಗದೀಶ್ ಪೂಜಾರಿ ಕೌಡೂರು, ನಾಗೇಶ್ ಪೂಜಾರಿ ಕೌಡೂರು, ಮಹೇಶ್ ಮಾಡ, ರಮೇಶ್ ಶೆಟ್ಟಿ ಕಲ್ಲೊಟ್ಟೆ, ಮಂಜುನಾಥ ಬೈಲೂರು, ಶ್ರೀನಿವಾಸ ಪೂಜಾರಿ ಗೋವಿಂದೂರು ಮತ್ತಿತರರು ಉಪಸ್ಥಿತರಿದ್ದರು.
