ಮೂಡುಬಿದಿರೆ ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಮಿತ್ತಬೈಲು ಇದರ 2025-26ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕೆ. ಪಿ. ಸುಚರಿತ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸೆ. 22ರಂದು ಸಂಘದ ಆವರಣದಲ್ಲಿ ಜರುಗಿತು.
ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ಸಂಘದಲ್ಲಿ 2432 ಸದಸ್ಯ ಬಲವಿದ್ದು, 8460970 ರೂಪಾಯಿ ಪಾಲು ಬಂಡವಾಳ ಹೊಂದಿದೆ.
ಪ್ರಸಕ್ತ ವರ್ಷ 920340.58 ರೂಪಾಯಿ ನಿವ್ವಳ ಲಾಭ ಪಡೆದುಕೊಂಡಿದೆ.
ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.
ಉಪಾಧ್ಯಕ್ಷರಾದ ಶಶಿಧರ ಪಿ. ನಾಯಕ್ ಧನ್ಯವಾದವಿತ್ತರು. ನಿರ್ದೆಶಕರಾದ ನಾರಾಯಣ ಮಡಿವಾಳ, ಪಿ. ವಿಶ್ವನಾಥ ನಾಯ್ಕ,
ನಾಗರಾಜ ಹೆಗಡೆ, ಶ್ರೀಮತಿ ನೀರಜಾಕ್ಷಿ ಎಸ್. ಶೆಟ್ಟಿ, ಶ್ರೀಮತಿ ವಿನುತ ಹೆಗ್ಡೆ, ಸುಕೇಶ್ ಪೂಜಾರಿ, ಸತೀಶ್ ಕಾವ,
ಪೌಲ್ ಡಿ’ಸೋಜಾ, ರಮೇಶ್, ಕಿಶೋರ್ ಕುಮಾರ್, ವಲಯ ಮೇಲ್ವಿಚಾರಕರು ಸಂಜಯ್ ಅತಿಕಾರಿ ಭಾಗವಹಿಸಿದ್ದರು.
