ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಕಾರ್ಕಳ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಸೆ. 20ರಂದು ಹೊಟೇಲ್ ಪ್ರಕಾಶ್ ನಲ್ಲಿ ಜರಗಲಿದೆ.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ (ರಿ.) ಕಾರ್ಕಳ ಅಧ್ಯಕ್ಷರಾದ ರಾಕೇಶ್ ಅಮೀನ್ ವಹಿಸಲಿದ್ದಾರೆ. ಎಸಿಸಿಇಯ ರಾಷ್ಟ್ರೀಯ ಅಧ್ಯಕ್ಷರಾದ ರಾಜೇಂದ್ರ ಕಲ್ಪಾವಿ ಪ್ರಧಾನ ಭಾಷಣಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಲ್ಟ್ರಾಟೆಕ್‌ನ ಮಂಗಳೂರು ಪ್ರದೇಶ ಮಾರುಕಟ್ಟೆ ಮುಖ್ಯಸ್ಥರಾದ ಮೋಹನ್ ಎಸ್., ಮುಂಬೈ ಗ್ರೇಟ್ ವೈಟ್ ಗ್ಲೋಬಲ್ ಪ್ರೈ.ಲಿ.ನ ಮಾರಾಟ ವ್ಯವಸ್ಥಾಪಕರಾದ ಅರುಣ್ ಕುಮಾರ್ ಜೈನ್, ಎನ್‌ಆರ್‌ಎಎಂಪಿನ ವಿಭಾಗ ಮುಖ್ಯಸ್ಥರಾದ ಅರುಣ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷರಾದ ರಾಕೇಶ್ ಅಮೀನ್ ತಿಳಿಸಿದ್ದಾರೆ.
