ಕಾರ್ಕಳಹೆಬ್ರಿ

ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ಮಹಾಸಭೆ

ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ನಿಯಮಿತ ಇದರ 11ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ಸೆ.22ರಂದು ಅಧ್ಯಕ್ಷರಾದ ಅಂತೋನಿ ಡಿಸೋಜ ನಕ್ರೆ ಇವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ನೂತನ ಕಟ್ಟಡದಲ್ಲಿ ನಡೆಯಿತು.

ಕೃಷಿ ಇಲಾಖೆ ವತಿಯಿಂದ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇಲ್ಲಿನ ವಿಜ್ಞಾನಿಯಾದ ಡಾ.ಭೂಮಿಕಾ ಹೆಚ್. ಆರ್ ರೈತರಿಗಾಗಿ ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ವಿಚಾರ ಸಂಕೀರ್ಣ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಕಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೃಷ್ಣ ಇವರು ಕೃಷಿ ಇಲಾಖೆಯಲ್ಲಿ ಸಿಗುವಂತಹ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಬಿ.ವಿ.ಶ್ರೀನಿವಾಸ್, ತೋಟಗಾರಿಕೆ ಇಲಾಖೆಯಲ್ಲಿ ಸಿಗುವಂತಹ ಯೋಜನೆಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಪ್ರಮಿತ್.ಪಿ.ಸುವರ್ಣರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಹೆಚ್ಚುವರಿ ನಿರ್ದೇಶಕರಾದ ನವೀನ್‌ಚಂದ್ರ ಜೈನ್ ನಿಟ್ಟೆ, ನಿರ್ದೇಶಕರಾದ ಹರೀಶ್ ಅಂಚನ್ ಈದು, ರಘುಚಂದ್ರ ಜೈನ್ ಇರ್ವತ್ತೂರು, ನಾರಯಣ್ ಪೂಜಾರಿ ನೂರಾಳ್‌ಬೆಟ್ಟು, ಅನಿಲ್ ಎಸ್ ಪೂಜಾರಿ ಮಾಳ, ವೆಂಕಟಕೃಷ್ಣ ಭಟ್ ನಿಟ್ಟೆ, ಕೇಶವ ಮರಾಠೆ ದುರ್ಗ, ಹರೀಶ್ ಹೆಚ್.ಪಿ ಹೊಸ್ಮಾರು, ಶ್ರೀಮತಿ ಸುಜಾತ ನಲ್ಲೂರು, ಶ್ರೀಮತಿ ಜಯಲಕ್ಷೀ ಮುಡಾರು, ಮತ್ತು ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಆಪ್ತೇಶ್ ಜೈನ್ ಉಪಸ್ಥಿತರಿದ್ದರು.

ಸಂಸ್ಥೆಯ ಉಪಾಧ್ಯಕ್ಷರಾದ ಹರಿಶ್ಚಂದ್ರ ತೆಂಡುಲ್ಕರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಸಭೆಯ ಕಾರ್ಯಸೂಚಿಯನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಜ್ಯೋತಿ ಎಚ್. ಕುಲಾಲ್ ಮಂಡಿಸಿದರು. ಸಂಸ್ಥೆಯ ವಾರ್ಷಿಕ ವರದಿಯನ್ನು ಶ್ರೀಮತಿ ಜ್ಯೋತಿ ಪೂಜಾರಿ ಮಂಡಿಸಿದರು. ನಿರ್ದೇಶಕರಾದ ಶ್ರೀಮತಿ ವೀಣಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರಾದ ಅಂತೋನಿ ಡಿಸೋಜ ನಕ್ರೆ ಧನ್ಯವಾದವಿತ್ತರು.

Related posts

ಶಿರ್ಲಾಲು ನಾರಾಯಣ ಗುರು ಸಂಘದಲ್ಲಿ ಪ್ರಥಮ ವರ್ಷದ ವರಮಹಾಲಕ್ಷ್ಮಿ ಪೂಜೆ

Madhyama Bimba

ಕೈಸ್ಟ್‌ಕಿಂಗ್: ಕರಾಟೆಯಲ್ಲಿ ಸುದೀಕ್ಷಾ ಪೂಜಾರಿ ಮತ್ತು ಅಕ್ಷಯ್ ಪ್ರಭು ಜಿಲ್ಲಾ ಮಟ್ಟಕ್ಕೆ ಆಯ್ಕೆ

Madhyama Bimba

ಮಾತಮರಿಯಾ ಮಹಿಳಾ ಮಹಾ ಸಂಘದಿಂದ ಕೊಂಕಣಿ ಮಾನ್ಯತಾ ದಿವಸ್ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More