ಕಾರ್ಕಳ

ಜೋಡುರಸ್ತೆಯಲ್ಲಿ ಎನ್‌ಪಿ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನೂತನ ಮಳಿಗೆ ಶುಭಾರಂಭ

ಕಾರ್ಕಳ: ಜೋಡುರಸ್ತೆಯ ಸಹಕಾರ ಸಿಂಧೂರ ಕಾಂಪ್ಲೆಕ್ಸ್‌ನ ಕೆಳ ಮಹಡಿ ಹಾಗೂ ಎರಡನೇ ಮಹಡಿಯಲ್ಲಿ ಎನ್‌ಪಿ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ಸ್ ನೂತನ ಮಳಿಗೆ ಶುಕ್ರವಾರ ಶುಭಾರಂಭಗೊಂಡಿತು.

ಸಭಾ ಕಾರ್ಯಕ್ರಮವನ್ನು ಎನ್‌ಪಿ ಗ್ರೂಪ್‌ನ ವಾಸುದೇವ ಭಟ್ ಅವರ ಮಾತಾ-ಪಿತರಾದ ಲಕ್ಷ್ಮೀ ವಾದಿರಾಜ ಭಟ್ ದಂಪತಿ ಉದ್ಘಾಟಿಸಿದರು.

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ ಅಧ್ಯಕ್ಷತೆ ವಹಿಸಿದ್ದರು.

ಕೆಳ ಮಹಡಿ ಮಳಿಗೆಯನ್ನು ಧನಲಕ್ಷ್ಮೀ ಕ್ಯಾಶ್ಯೂಸ್ ಮಾಲಕರಾದ ಶ್ರೀಪತಿ ಭಟ್ ಹಾಗೂ ಎರಡನೇ ಮಹಡಿ ಮಳಿಗೆಯನ್ನು ವಿಕ್ರಮ್ ಹೆಗ್ಡೆ ಕಣಂಜಾರು ಹಾಗೂ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಉದ್ಘಾಟಿಸಿದರು.

ಎನ್‌ಪಿ ಗ್ರೂಪ್ ವೆಬ್‌ಸೈಟ್‌ನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಅಶ್ವತ್ ಎಸ್. ಎಲ್ ಅವರು ಅನಾವರಣಗೊಳಿಸಿದರು.

ಎನ್‌ಪಿ ಗ್ರೂಪ್ ಚೇರ್ಮೆನ್, ಮ್ಯಾನೇಜಿಂಗ್ ಡೈರೆಕ್ಟರ್ ವಾಸುದೇವ ಭಟ್ ನೆಕ್ಕರಪಲ್ಕೆ, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಕಾರ್ಕಳ ಬಿಲ್ಲವ ಸಮಾಜ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಜೋಡುರಸ್ತೆ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ರಾವ್, ಜಾನ್ಸ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಜಾನ್ ಡಿ’ಸಿಲ್ವಾ, ಉದ್ಯಮಿ ಚಂದ್ರಶೇಖರ ಶೆಟ್ಟಿ, ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರವೀಂದ್ರ ನಾಯಕ್ ಉಪಸ್ಥಿತರಿದ್ದರು.

ರಮೇಶ್ ಕಲ್ಲೊಟ್ಟೆ ಸ್ವಾಗತಿಸಿ, ಮೇಘಾ, ಶ್ರೇಯಾ ಪ್ರಾರ್ಥಿಸಿ, ಮಹಿಮಾ ನಿರೂಪಿಸಿದರು.

Related posts

ಹೆಬ್ರಿ: ಮಾದಕ ದ್ರವ್ಯ ವಿರೋಧಿ ದಿನಾಚರಣೆ

Madhyama Bimba

ಕಾರ್ಕಳ: ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ

Madhyama Bimba

ಕಾರ್ಕಳ: ವಿಶ್ವ ಹೃದಯ ದಿನ ಅಂಗವಾಗಿ ಬೃಹತ್ ವಾಕಥಾನ್: 500ಕ್ಕೂ ಹೆಚ್ಚು ಮಂದಿ ಭಾಗಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More