Blog

ಕುಡಿತದ ಅಮಲಿನಲ್ಲಿ ಬಸ್ಸಿಗೆ ತಡೆಯೊಡ್ಡಿದ ಯುವಕರು- ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿದ ಪೊಲೀಸರು

ಉಡುಪಿಯಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವೇಗದೂತ ಬಸ್ಸಿಗೆ ತಡೆಯೊಡ್ಡಿ ಸಂಚಾರಕ್ಕೆ ತೊಂದರೆ ನೀಡಿದ ಮಂಗಳೂರಿನ ನಾಲ್ವರು ಯುವಕರಿಗೆ ಪೊಲೀಸರು ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಿಂದ ಮಂಗಳೂರಿಗೆ ಹೋಗುತ್ತಿದ್ದ ನವದುರ್ಗಾ ಬಸ್ಸಿಗೆ ಅಕ್ಟೋಬರ್ 2 ರಂದು ಮುಲ್ಕಿ ಬಳಿ ತಡೆಯೊಡ್ಡಿದ ಫೋರ್ಡ್ ಕಂಪೆನಿಯ ಕೆಎ 28 ಝಡ್9567 ನಂಬ್ರದ ಕಾರಿನಲ್ಲಿದ್ದ ನಾಲ್ವರು ಯುವಕರು ತಡೆಯೊಡ್ಡುತ್ತಾ ಸಾಗಿದ್ದರು. ನಂತರ ಬಸ್ಸನ್ನು ತಡೆದು ನಿಲ್ಲಿಸಿ ಚಾಲಕನ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಈ ಬಗ್ಗೆ ಪೊಲೀಸರಿಗೆ ಬಸ್ಸಿನ ಸಿಬ್ಬಂದಿಗಳು ದೂರು ನೀಡಿದ ಮೇರೆಗೆ ಮುಕ್ಕ ಚೆಕ್ ಪೋಸ್ಟ್ ಬಳಿ ಪೊಲೀಸರು ಕಾರನ್ನು ತಡೆದು ನಿಲ್ಲಿಸಿದಾಗ ಕಾರಿನಲ್ಲಿದ್ದ ಯುವಕರು ಅಮಲು ಪದಾರ್ಥ ಸೇವಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕುಡಿತ ಮತ್ತು ಚಾಲನೆ ಪ್ರಕರಣ ದಾಖಲಿಸಿದ್ದಾರೆ. ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ.

Related posts

ಕೋಳಿ ಅಂಕ

Madhyama Bimba

ಕಜ್ಕೇ ಮಂಜುನಾಥ್ ಕಾಮತ್ ಹಾಗೂ ಗುಂಡಾಳ ಸದಾಶಿವ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

Madhyama Bimba

ಉಡುಪಿ ಜಿಲ್ಲೆಯಲ್ಲಿ ನಾಳೆ ಶನಿವಾರ ಶಾಲೆಗಳಿಗೆ ರಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More