Blog

ಕಜ್ಕೇ ಮಂಜುನಾಥ್ ಕಾಮತ್ ಹಾಗೂ ಗುಂಡಾಳ ಸದಾಶಿವ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

ಶಿವಪುರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ಮಠದಲ್ಲಿ ಭಾನುವಾರ ಇತ್ತೀಚೆಗೆ ನಿಧನರಾದ ಕಜ್ಕೆ ಮಂಜುನಾಥ ಕಾಮತ್‌ ಮುದ್ರಾಡಿ ಮತ್ತು ಗುಂಡಾಳ ಸದಾಶಿವ ಶೆಟ್ಟಿ ಅವರಿಗೆ ನುಡಿನಮನ ಸಲ್ಲಿಸಲಾಯಿತು.


ಸೂರಿಮಣ್ಣು ಮಠದಲ್ಲಿ : ನುಡಿನಮನ
ಕಜ್ಕೆ ಮಂಜುನಾಥ ಕಾಮತ್‌ ಮತ್ತು ಗುಂಡಾಳ ಸದಾಶಿವ ಶೆಟ್ಟಿ ಸಾರ್ಥಕ ಬದುಕು ಸಾಗಿಸಿ ಮಾದರಿಯಾಗಿದ್ದಾರೆ : ರವಿರಾಜ್‌ ಉಪಾಧ್ಯಾಯ

ಹೆಬ್ರಿ : ಕಜ್ಕೆ ಮಂಜುನಾಥ ಕಾಮತ್‌ ಮತ್ತು ಗುಂಡಾಳ ಸದಾಶಿವ ಶೆಟ್ಟಿ ಅವರು ಆತ್ಮೋದ್ಧಾರಕ್ಕಾಗಿ ಹೇಗೆ ಬದುಕಬೇಕು ಎಂದು ತೋರಿಸಿ ಸಾರ್ಥಕ ಬುದುಕು ಸಾಗಿಸಿ ಸಮಾಜದಲ್ಲಿ ಮಾದರಿಯಾಗಿದ್ದಾರೆ. ಭಕ್ತಿ ಮಾರ್ಗದಲ್ಲಿ ನಡೆದು ಭಗವಂತನೆಡೆಗೆ ಸಾಗಿ ಸಾರ್ಥಕತೆ ಕಂಡಿದ್ದಾರೆ. ಅವರಿಬ್ಬರ ಬದುಕು ನಮಗೆಲ್ಲರಿಗೂ ದಾರಿ ತೋರಿದ್ದಾರೆ ಶಿವಪುರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ಮಠದ ಶ್ರೀ ರವಿರಾಜ್‌ ಉಪಾಧ್ಯಾಯ ಹೇಳಿದರು.


ಅವರು ಭಾನುವಾರ ಶಿವಪುರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ಮಠದಲ್ಲಿ ಭಾನುವಾರ ಇತ್ತೀಚೆಗೆ ನಿಧನರಾದ ಕಜ್ಕೆ ಮಂಜುನಾಥ ಕಾಮತ್‌ ಮುದ್ರಾಡಿ ಮತ್ತು ಗುಂಡಾಳ ಸದಾಶಿವ ಶೆಟ್ಟಿ ಅವರಿಗೆ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಿದರು.
ಮುದ್ರಾಡಿ ಶ್ರೀ ಗುರುರಕ್ಷಾ ಚಾರಿಟೀಬಲ್‌ ಟ್ರಸ್ಟ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ ಭಜನೆಯ ಮೂಲಕ ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು ಸಮಾಜಕ್ಕೆ ತೋರಿಸಿ ಎಲ್ಲರಿಗೂ ಬೇಕಾದವರಂತೆ ಬದುಕಿದವರು, ಒಳ್ಳೇಯ ರೀತಿಯಲ್ಲಿ ಬದುಕಿ ಸಮಾಜಕ್ಕೆ ತೋರಿದವರು ಎಂದು ನಮನ ಸಲ್ಲಿಸಿದರು.


ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ಮಠದ ಮುಖ್ಯಸ್ಥ ಸದಾಶಿವ ಉಪಾಧ್ಯಾಯ, ಕಬ್ಬಿನಾಲೆ ಸೀತಾರಾಮ ಹೆಬ್ಬಾರ್‌, ಗಣಪತಿ ಮುದ್ರಾಡಿ, ಗುಂಡಾಳ ಸಂದೇಶ ಶೆಟ್ಟಿ, ಶಿವಪುರ ಸುರೇಶ ಶೆಟ್ಟಿ ನುಡಿ ನಮನ ಸಲ್ಲಿಸಿದರು.
ನೂರಾರು ಮಂದಿ ಭಾಗವಹಿಸಿದ್ದರು.

Related posts

ಬೈಕ್ ಕಾರು ಅಪಘಾತ

Madhyama Bimba

ಶಿಥಿಲಾವಸ್ತೆಗೆ ತಲುಪಿದ ಅಚ್ಚನ ಹಳ್ಳಿ ಸರ್ಕಾರಿ ಶಾಲೆ

Madhyama Bimba

ಕಾರ್ಕಳದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಯುವ ಕಾಂಗ್ರೆಸ್ ಅರೋಪ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More