ನಿಟ್ಟೆ ಕೆಮ್ಮಣ್ಣುನಲ್ಲಿ ಕೋಳಿ ಅಂಕ: ಪ್ರಕರಣ ದಾಖಲು
ಕಾರ್ಕಳ: ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿ ಕೆಲವೊಂದು ಜನರು ಕೋಳಿಗಳ ಕಾಲುಗಳಿಗೆ ಬಾಲನ್ನು ಕಟ್ಟಿ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದಾರೆಂದು ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಸಿ, ಆನಂದರವರು ಅಲ್ಲಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕೋಳಿಗಳ ಮೇಲೆ ಹಣವನ್ನು ಕಟ್ಟಿ ಕೋಳಿಗಳ ಕಾಲಿಗೆ ಹಿಂಸಾತ್ಮಕ ರೀತಿಯಲ್ಲಿ ಬಾಲನ್ನು ಕಟ್ಟಿ ಜೂಜಾಟ ಆಡುತ್ತಿದ್ದ ಅಪರಿಚಿತರ ಆಪಾದಿತರ ವಿರುದ್ದ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.