ಕಾರ್ಕಳ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾದ ಘಟನೆ ಅ. 02ರಂದು ವರದಿಯಾಗಿದೆ.
ಅ. 02ರಂದು ಗಾಂಧಿ ಜಯಂತಿಯ ದಿನವಾಗಿ ಮದ್ಯ ಮಾರಾಟ ನಿಷೇಧವಿದ್ದು, ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ತನಿಖೆ) ಶಿವಕುಮಾರ್ ಎಸ್ ಆರ್. ರವರು ದಾಳಿ ನಡೆಸಿದಾಗ ಕಾರ್ಕಳ ಬಸ್ಸು ನಿಲ್ದಾಣ ಬಳಿ ಇರುವ ಸ್ವಾಗತ್ ಬಾರ್ & ರೆಸ್ಟೋರೆಂಟ್ ಲಾಡ್ಜಿಂಗ್‌ನ ಪ್ಯಾಸೇಜ್‌ನಲ್ಲಿ ಜಗದೀಶ್ ಎಂಬಾತ ಮದ್ಯ ಮಾರಾಟ ಮಾಡಲು ಸುಮಾರು ರೂ. 15,015 ಮೌಲ್ಯದ ಮದ್ಯವನ್ನು ಶೇಖರಿಸಿಕೊಂಡಿದ್ದ. ಈ ಮದ್ಯವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ.
ರಾಜೇಶ್ ಶೆಟ್ಟಿ ಲೀಸ್‌ದಾರನಾಗಿದ್ದು, ಜಯಪ್ರಕಾಶ್ ಮತ್ತು ಕಟ್ಟಡದ ಲೈಸೆನ್ಸ್‌ದಾರರಾದ ರಾಜೇಶ್ ಶೆಟ್ಟಿಯವರು ಅಕ್ರಮವಾಗಿ ಮದ್ಯ ಸ್ವಾದೀನತೆ ಹೊಂದಿ ಬಾರ್ & ರೆಸ್ಟೊರೆಂಟ್‌ಗೆ ಬರುತ್ತಿದ್ದ ಗ್ರಾಹಕರಿಗೆ ಮದ್ಯವನ್ನು ಸರಬರಾಜು ಮಾಡಲು ಅನುವು ಮಾಡಿ ಕೊಟ್ಟಿರುವುದಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
