Blog

ಕಾರ್ಕಳ: ಅನುಮತಿಯಿಲ್ಲದೆ ರೈಫಲ್‌ಗೆ ಟೆಲಿಸ್ಕೋಫ್ ಆಳವಡಿಕೆ- ಕೇಸು ದಾಖಲು

ಕಾರ್ಕಳ: ಅನುಮತಿಯಿಲ್ಲದೆ ರೈಫಲ್‌ಗೆ ಟೆಲಿಸ್ಕೋಫ್ ಆಳವಡಿಕೆ ಮಾಡಿದ ಕೌಡೂರು ದಿನೇಶ್ ಶೆಟ್ಟಿಯವರ ಮೇಲೆ ಕೇಸು ದಾಖಲಾದ ಘಟನೆ ವರದಿಯಾಗಿದೆ.

ಇವರು ಎನ್‌ಪಿಬಿ ರೈಫಲ್ (ಬೇರಿಂಗ್ ನಂಬ್ರ 12669) ವನ್ನು ಕರ್ನಾಟಕ ರಾಜ್ಯದ ವ್ಯಾಪ್ತಿಗೆ ಆತ್ಮರಕ್ಷಣೆ ಬಗ್ಗೆ ಪರವಾನಿಗೆ ಹೊಂದಿದ್ದು ಪರವಾನಿಗೆ ದಿನಾಂಕ  31/12/2027 ರವರೆಗೆ ಊರ್ಜಿತದಲ್ಲಿ ಇರುತ್ತದೆ.

ದಿನೇಶ್ ಶೆಟ್ಟಿಯವರು ರೈಫಲ್‌ನ್ನು ಠಾಣೆಯಲ್ಲಿ ಡೆಪಾಸಿಟ್ ಇರಿಸಿದ್ದು, ಉಡುಪಿ ಜಿಲ್ಲಾ ಸಶಸ್ರ್ತ (armer ) ವಿಭಾಗದವರು ಡೆಪಾಸಿಟ್ ಇಟ್ಟಿರುವ ಬಂದೂಕುಗಳನ್ನು ಪರಿಶೀಲಿಸಿದಾಗ ರೈಪಲ್‌ಗೆ ಹೆಚ್ಚುವರಿ ಟೆಲಿಸ್ಕೋಫ್ ಆಳವಡಿಸಿರುವುದು ಕಂಡು ಬಂದಿರುತ್ತದೆ. ಅವರಿಗೆ ನೀಡಿರುವ ಲೈಸನ್ಸ್‌ನಲ್ಲಿ ರೈಪಲ್‌ಗೆ ಯಾವುದೇ ಟೆಲಿಸ್ಕೋಫ್ ಆಳವಡಿಸಲು ಅನುಮತಿ ನೀಡಿರುವುದಿಲ್ಲ. ಆದರೂ ಸಹ ಅವರು ಸಕ್ಷಮ ಪ್ರಾಥಿಕಾರದಿಂದ ಅನುಮತಿ ಪಡೆಯದೇ ಪರವಾನಿಗೆ ನಿಯಮವನ್ನು ಉಲ್ಲಂಘನೆ ಮಾಡಿ ಯಾವುದೋ ದುರುದ್ದೇಶದಿಂದ ರೈಪಲ್ ನಲ್ಲಿ ಟೆಲಿಸ್ಕೋಫ್ ಆಳವಡಿಸಿ ಮಾರ್ಪಾಡು ಮಾಡಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಚಾರದಲ್ಲಿ ಬೈಕ್ ಅಪಘಾತ

Madhyama Bimba

ಆಗಸ್ಟ್ 7 ರಂದು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳಕ್ಕೆ ಚಾಲನೆ

Madhyama Bimba

ರಾಷ್ಟ್ರ ಸುಧಾ ವಾಹಿನಿಗೆ ಬೇಕಾಗಿದ್ದಾರೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More