ಕಾರ್ಕಳಹೆಬ್ರಿ

ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ, ಕುಪ್ಮಾ (ರಿ.) ಉಡುಪಿ ಜಿಲ್ಲಾ ಸಮಿತಿ, ಕುಪ್ಮಾ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಸಮಾರಂಭ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾನಗರದಲ್ಲಿ ನಡೆಯಿತು.

ಆಯ್ಕೆಗೊಂಡ ಐವರು ಉಪನ್ಯಾಸಕರುಗಳಾದ ಕುಂದಾಪುರ – ಸೆಂಟ್ ಮೇರೀಸ್ ಕಾಂಪೋಸಿಟ್ ಪದವಿಪೂರ್ವ ಕಾಲೇಜಿನ ರೇಶ್ಮಾ ಫೆರ್ನಾಂಡೀಸ್, ಸುಣ್ಣಾರಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಸ್ಮಿತಾಲ್ ಪದ್ಮಜಾ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸೌಜನ್ಯಾ ಹೆಗ್ಡೆ, ಉಡುಪಿ ವಿದ್ಯೋದಯ ಶಿಕ್ಷಣ ಸಂಸ್ಥೆಯ ಶಕುಂತಲಾ ಪಾಲನ್, ಕುಂದಾಪುರ ವೆಂಕಟರಮಣ ಶಿಕ್ಷಣ ಸಂಸ್ಥೆಯ ಲತಾ ಪೈ ಇವರಿಗೆ ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕರ್ನಾಟಕ ರಾಜ್ಯ ಕುಪ್ಮಾ ಕಾರ್ಯದರ್ಶಿಗಳಾದ ಪ್ರೊ. ನರೇಂದ್ರ ಎಲ್. ನಾಯಕ್ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಕುಪ್ಮಾ ಕರ್ನಾಟಕ ರಾಜ್ಯ ಗೌರವಾಧ್ಯಕ್ಷ ಡಾ. ಕೆ. ಸಿ. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.

ಕುಪ್ಮಾ ಕರ್ನಾಟಕ ರಾಜ್ಯ ಇದರ ಗೌರವಾಧ್ಯಕ್ಷರಾದ ಕೆ. ರಾಧಾಕೃಷ್ಣ ಶೆಣೈ, ಕರ್ನಾಟಕ ರಾಜ್ಯ ಕುಪ್ಮಾ ಉಪಾಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ , ಕುಪ್ಮಾ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಡಾ. ಮಂಜುನಾಥ್ ಎಸ್. ರೇವಣ್ಕರ್ ಉಪಸ್ಥಿತರಿದ್ದರು.

ಕುಪ್ಮಾ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಪ್ಮಾ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಅಶ್ವತ್ ಎಸ್. ಎಲ್ ವಂದಿಸಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಶ್ರೀಮತಿ ಸಂಗೀತ ಕಾರ್ಯಕ್ರಮ ನಿರೂಪಿಸಿದರು.

Related posts

ಕಾರ್ಕಳ ಅತ್ತೂರು ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿ ವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಭೇಟಿ

Madhyama Bimba

ಶಿರ್ಲಾಲು ನಾರಾಯಣ ಗುರು ಸಂಘದಲ್ಲಿ ಪ್ರಥಮ ವರ್ಷದ ವರಮಹಾಲಕ್ಷ್ಮಿ ಪೂಜೆ

Madhyama Bimba

ಹೆಬ್ರಿ: ಕುಚ್ಚೂರು ನಿವಾಸಿ ನಾಪತ್ತೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More