ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ ಕೆಎಂಸಿ ಮಣಿಪಾಲ ಇಲ್ಲಿನ ತುರ್ತು ಚಿಕಿತ್ಸಾ ಘಟಕದ ನುರಿತ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಂದ “ಹೃದಯ ಮತ್ತು ಶ್ವಾಸಕೋಶದ ಮರು ಚೇತನ ಪ್ರಕ್ರಿಯೆ (ಸಿಪಿಆರ್) ” ಹಾಗೂ “ಪ್ರಥಮ ಚಿಕಿತ್ಸೆ” ಕುರಿತು ವಿಶೇಷ ಪ್ರಾತ್ಯಕ್ಷಿಕಾ ಕಾರ್ಯಾಗಾರ ಅ. 06 ರಂದು ಕಾರ್ಕಳದ ಕುಕ್ಕುಂದೂರಿನ ನಕ್ಸಲ್ ನಿಗ್ರಹ ಘಟಕದ ತರಬೇತಿ ಶಿಬಿರದಲ್ಲಿ ನಡೆಯಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ನಕ್ಸಲ್ ನಿಗ್ರಹ ದಳದ ಕಮಾಂಡೋಗಳು, ಕಾರ್ಕಳ ಸರಕಾರಿ ಪಾಲಿಟೆಕ್ನಿಕ್‌ನ ರೋಟರಾಕ್ಟ್ ಕ್ಲಬ್‌ನ ವಿದ್ಯಾರ್ಥಿಗಳು ಹಾಗೂ ಕಾರ್ಕಳ ಶಿರ್ಡಿ ಸಾಯಿ ಎಕ್ಸೆಲೆನ್ಸಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಸ್ವತಃ ಪ್ರಾಯೋಗಿಕವಾಗಿ ಪ್ರದರ್ಶನ ನೀಡಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೊ. ಮಂಜುನಾಥ ಹೆಗ್ಡೆ, ಮಾರ್ಗದರ್ಶಕರಾದ ರೊ. ಡಾ. ಭರತೇಶ್ ಆದಿರಾಜ್, ನಿಕಟಪೂರ್ವ ಅಧ್ಯಕ್ಷರಾದ ರೊ. ಸುರೇಂದ್ರ ನಾಯಕ್, ರೊ. ಉಪೇಂದ್ರ ವಾಗ್ಲೆ, ರೊ. ಕೃಷ್ಣಪ್ಪರವರು ಭಾಗವಹಿಸಿದ್ದರು.
