ಕಾರ್ಕಳ

ಕ್ರೈಸ್ಟ್‌ಕಿಂಗ್: ತಂಬಾಕು ಸೇವನೆಯ ದುಷ್ಪರಿಣಾಮಗಳ ಮಾಹಿತಿ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಕು. ಶೈಲಾ ಶಮ್ನೂರು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು “ತಂಬಾಕು ಸೇವನೆಯು ವಿವಿಧ ರೀತಿಯ ಕ್ಯಾನ್ಸರ್, ಮೆದುಳು ನಿಷ್ಕ್ರೀಯಗೊಳ್ಳುವುದು, ಸ್ನಾಯು ಸೆಳೆತ, ರಕ್ತ ಸಂಚಾರಕ್ಕೆ ತೊಂದರೆ, ಉಚ್ಛಾರಣಾ ದೋಷ, ಮಾನಸಿಕ ಖಿನ್ನತೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವರ್ಷಕ್ಕೆ ಸುಮಾರು 6% ಜನರು ತಂಬಾಕು ಸೇವನೆಯ ದುಶ್ಚಟಗಳಿಂದ ಸಾವನ್ನಪ್ಪುತ್ತಿರುವುದು ತಂಬಾಕಿನ ದುಷ್ಪರಿಣಾಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಯುವಜನತೆ ತಂಬಾಕು ಸೇವನೆಯಿಂದ ತಾವೂ ದೂರವಿದ್ದುಕೊಂಡು ಸೇವನೆಯ ದುಶ್ಚಟಕ್ಕೆ ಒಳಗಾದವರನ್ನು ಅದರಿಂದ ಹೊರತರುವ ಸಾಮಾಜಿಕ ಕಾರ್ಯದಲ್ಲಿ ತೊಡಗಬೇಕು” ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಕಾಮತ್ ಅವರು ಮಾತನಾಡಿ “ಉತ್ತಮ ಜೀವನಕ್ಕಾಗಿ ಉತ್ತಮ ಆಹಾರ, ಶುದ್ಧ ನೀರು, ಶುದ್ಧ ಗಾಳಿಯ ಜೊತೆಗೆ ದುಶ್ವಟಗಳಿಂದ ಮುಕ್ತವಾಗಿರುವುದು ಬಹಳ ಮುಖ್ಯ. ಮಕ್ಕಳು ದುಶ್ಚಟಗಳಿಂದ ದೂರವಿರುವುದರ ಜೊತೆಗೆ ದುಶ್ಚಟಗಳನ್ನು ಹೊಂದಿರುವವರ ಸ್ನೇಹದಿಂದ ಕೂಡಾ ದೂರವಿರಬೇಕು. ದುಶ್ಚಟಗಳಿಗೆ ದಾಸರಾಗಿರುವವರು ಉಳಿದವರನ್ನು ಅದರೊಳಗೆ ಎಳೆದುಕೊಳ್ಳುತ್ತಾರೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು” ಎಂದು ಹೇಳಿದರು.


ಈ ಸಂದರ್ಭದಲ್ಲಿ ತಂಬಾಕು ವಿರೋಧಿ ಆಂದೋಲನದ ಹಿನ್ನೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಅಳವಡಿಸಬೇಕಾದ ವಿವಿಧ ಜಾಗೃತಿ ಫಲಕಗಳನ್ನು ಅಧಿಕಾರಿಗಳು ಸಂಸ್ಥೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.


ಸಂಸ್ಥೆಯ ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಪಾವನ ಧನ್ಯರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಶಿಜಿ ಸ್ವಾಗತಿಸಿ ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

Madhyama Bimba

ನ:7 ರಿಂದ ತಾಲೂಕುಗಳಲ್ಲಿ ಪೌತಿ ಅಂದೋಲನ

Madhyama Bimba

ಪೆರ್ವಾಜೆ ಉಮಾನಾಥ ಪ್ರಭು ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More