ಕಾರ್ಕಳ

ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಕ್ರೈಸ್ಟ್‌ಕಿಂಗ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ ಇವರ ವತಿಯಿಂದ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಚಾಮರಾಜನಗರ ಜಿಲ್ಲೆಯಲ್ಲಿ ನಡೆಯಲಿರುವ ಮೈಸೂರು ವಿಭಾಗಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಎಂಟನೇ ತರಗತಿಯ ಗ್ರಂಥ ಹಾಗೂ ಏಳನೇ ತರಗತಿಯ ಅಂಜನಿ ಕಾಮತ್ ಪ್ರತಿನಿಧಿಸಿದ್ದ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ.

ಒಂಬತ್ತನೇ ತರಗತಿಯ ಖುಷಿ ಶೆಟ್ಟಿ ಹಾಗೂ ಹತ್ತನೇ ತರಗತಿಯ ಜೋನ್ನಾ ವೆಲೆನ್ಸಿಯಾ ಫೆರಾವೊ ಅವರನ್ನೊಳಗೊಂಡ ಪ್ರೌಢಶಾಲಾ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಇದರಲ್ಲಿ ಖುಷಿ ಶೆಟ್ಟಿ ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾಳೆ.

Related posts

ಸೆಪ್ಟೆಂಬರ್ 20: .ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

Madhyama Bimba

ಹೆಬ್ರಿ ಮಲ್ಲಿಕಾ ಶೆಟ್ಟಿ ನಿಧನ

Madhyama Bimba

ಹೆಬ್ರಿ: ವಿಶ್ವ ಪರಿಸರ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More