ಕಾರ್ಕಳ: ಹಿರ್ಗಾನದ ಸಂತಮರಿಯ ಗೊರಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಾಗಿ ಕೌಶಲ್ಯ ಆಧಾರಿತ ಸಾಹಸ ಶಿಬಿರವು ಅ.9 ರಂದು ಜರಗಿತು.
ಶಿಬಿರದ ಸಂಯೋಜಕರಾದ ಶೇಕ್ ಇರ್ಫಾನ್, ಶಾಲಾ ಸಂಚಾಲಕರಾದ ವಂದನೀಯ ಫಾದರ್ ಜಾನ್ ವಾಲ್ಟನ್ ಮೆಂಡೋಸ, ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಎಸ್ಲಿನ್ ಲವೀನಾ ಡಿಸೋಜಾ, ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.
ಸಹ ಶಿಕ್ಷಕಿಯಾದ ಶ್ರೀಮತಿ ಮ್ಯೂರಲ್ ಪಿಂಟೋ ಕಾರ್ಯಕ್ರಮವನ್ನು ನಿರೂಪಿಸಿದರು.
