ಕಾರ್ಕಳಹೆಬ್ರಿ

ಶಿವಪುರ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಶಿವಪುರ: ಹೆಬ್ರಿ ತಾಲೂಕಿನ ಶಿವಪುರ-೧ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಸೆ. 8ರಂದು ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಯಡ್ದೆ ರಾಘವೇಂದ್ರ ಪೂಜಾರಿ ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀಮತಿ ಗುಲಾಬಿ, ಶ್ರೀಮತಿ ವೀಣಾ ಕುಮಾರಿ ಎಚ್.ಎನ್., ರಮಾನಂದ ಶೆಟ್ಟಿ, ಶ್ರೀಮತಿ ದಿವ್ಯಾ ಬಿ., ಶ್ರೀಮತಿ ಗೀತಾ ನಾಯಕ್, ಶ್ರೀಮತಿ ಗಾಯತ್ರಿ, ಶ್ರೀ ರವೀಂದ್ರ ಶೆಟ್ಟಿ, ಶ್ರೀಮತಿ ಶೈಲಜಾ, ಶ್ರೀಮತಿ ವೀಣಾ ನಾಯಕ್ ಹಾಗೂ ಶ್ರೀಮತಿ ಪುಷ್ಪ ಅವರ ಸೇವೆಯನ್ನು ಸ್ಮರಿಸಿ, ಶಿಕ್ಷಕರ ದಿನಾಚರಣೆಯ ಸವಿ ನೆನಪಿಗಾಗಿ ಅಭಿನಂದಿಸಿ ಗೌರವಿಸಲಾಯಿತು.


ಇದೇ ಸಂದರ್ಭದಲ್ಲಿ ಶಾಲೆಯ ವಾಹನ ಚಾಲಕರಾದ ನಾಗರಾಜ್, ಕಿರಣ್, ಶಾಲಾ ಸಹಾಯಕಿಯಾದ ಶ್ರೀಮತಿ ಪ್ರತಿಮಾ ಹಾಗೂ ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ಚೆನ್ನಬಸಮ್ಮ, ಶ್ರೀಮತಿ ಮೀನಾಕ್ಷಿ ಮತ್ತು ಶ್ರೀಮತಿ ವಸಂತಿ ಅವರನ್ನು ಸಹ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.


ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಮೂರ್ಸಾಲು ಮೋಹನದಾಸ ನಾಯಕ್, ಹುಣ್ಸೆಡಿ ಸುರೇಶ್ ಶೆಟ್ಟಿ, ಶೋಭಾ ಶೆಟ್ಟಿ, ತಾಲೂಕು ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರಾದ ರಮೇಶ್ ಕುಮಾರ್, ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಶ್ರೀಮತಿ ಸುಮಿತ್ರಾ ನಾಯಕ್, ಶಿವಪುರದ ಉದ್ಯಮಿಗಳಾದ ಗಣೇಶ್ ಕುಲಾಲ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಅನುಸೂಯ ನಾಯಕ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗುಲಾಬಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಅನುಸೂಯ ನಾಯಕ್ ಸ್ವಾಗತಿಸಿದರು. ಸಮಿತಿಯ ಸದಸ್ಯರಾದ ನಾಗರಾಜ್ ವಂದಿಸಿದರು. ಪಾಡಿಗಾರದ ಸಚಿನ್ ಕಾರ್ಯಕ್ರಮ ನಿರೂಪಿಸಿದರು.

Related posts

ಕಾರ್ಕಳ: ಅಕ್ರಮ ಕೆಂಪು ಕಲ್ಲು ಸಾಗಾಟ- ಪ್ರಕರಣ ದಾಖಲು

Madhyama Bimba

ಚಿಕ್ಕಲ್ ಬೆಟ್ಟು ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ: ನಿವೃತ್ತ ಮುಖ್ಯೋಪಾಧ್ಯಾಯರಾದ ಉದಯ ಶೆಟ್ಟಿ ದಂಪತಿಗೆ ಸನ್ಮಾನ

Madhyama Bimba

ಸ. ಹಿ. ಪ್ರಾ. ಶಾಲೆ ಬಸ್ರಿ ಬೈಲೂರು: ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More