ಹೆಬ್ರಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ 16ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ಅ. 17ರಿಂದ 19ರವರೆಗೆ ಹೆಬ್ರಿ ಶ್ರೀಮತಿ ಶೀಲಾ ಸುಭೋದ್ ಬಲ್ಲಾಳ್ ಬಂಟರ ಸಭಾಭವನದಲ್ಲಿ ಜರಗಲಿದೆ.
ಅ. 17ರಂದು ಬೆಳಿಗ್ಗೆ ಗಂಟೆ 9.00ಕ್ಕೆ ಶ್ರೀ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆ, ದುರ್ಗಾಹೋಮ, ನಂತರ ಶಾರದಾ ಮಹೋತ್ಸವ ಸಮಿತಿಯ ಮಹಿಳೆಯರಿಂದ ಹಾಗೂ ಗಣೇಶ್ ಪಡಿಯಾರ್ ಮತ್ತು ಬಳಗ ವಿನೂನಗರ, ಹೆಬ್ರಿ ಇವರಿಂದ ಭಜನೆ, ಮಧ್ಯಾಹ್ನ ಗಂಟೆ 12.30ಕ್ಕೆ ಪೂಜೆ, ಪ್ರಸಾದ ವಿತರಣೆ, ಸಂಜೆ ಗಂಟೆ 5.00ಕ್ಕೆ ದುರ್ಗಾ ಸಪ್ತಶತಿ ಪಾರಾಯಣ, ನಂತರ ಸೀತಾನದಿ ಶ್ರೀ ರಾಮ ಭಜನಾ ಮಂಡಳಿಯಿಂದ ಕುಣಿತ ಭಜನೆ, ರಾತ್ರಿ ಗಂಟೆ 8.00ಕ್ಕೆ ರಂಗ ಪೂಜೆ ನಡೆಯಲಿದೆ.
ಅ. 18ರಂದು ಬೆಳಿಗ್ಗೆ ಗಂಟೆ 9.00ಕ್ಕೆ: ಪೂಜೆ, ನಂತರ ಸದಾಶಿವ ಉಪಾಧ್ಯಾಯ ಮತ್ತು ಬಳಗ ಸೂರಿಮಣ್ಣು, ಶಿವಪುರ ಹಾಗೂ ಸುಬ್ರಹ್ಮಣ್ಯ ಕಂಗಿನಾಯ ಮತ್ತು ಬಳಗದವರಿಂದ ಭಜನೆ, ಮಧ್ಯಾಹ್ನ ಪೂಜೆ, ಸಂಜೆ ಗಂಟೆ 5.00ಕ್ಕೆ ದುರ್ಗಾ ಸಪ್ತಶತಿ ಪಾರಾಯಣ, ನಂತರ ಹೆಬ್ರಿ, ಬಚ್ಚಪ್ಪು ಗದ್ದಿಗೆ ದುರ್ಗಾಪರಮೇಶ್ವರಿ ಅಮ್ಮನವರ ಭಜನಾ ಮಂಡಳಿಯಿಂದ ಕುಣಿತ ಭಜನೆ, ಚಾಣಕ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹೆಬ್ರಿ ಇವರಿಂದ ಗಾನ-ನಾಟ್ಯ-ವೈಭವ, ರಾತ್ರಿ ಪೂಜೆ, ಗಂಟೆ 8.30ಕ್ಕೆ ಸಾಯಿಶಕ್ತಿ ಕಲಾಬಳಗ ಉರ್ವ ಚಿಲಿಂಬಿ ಮಂಗಳೂರು ಇವರಿಂದ ಜೋಡು ಜೀಟಿಗೆ ತುಳು ಜಾನಪದ ನಾಟಕ ಪ್ರದರ್ಶನಗೊಳ್ಳಲಿದೆ.
ಅ. 19 ರಂದು ಬೆಳಿಗ್ಗೆ ಗಂಟೆ 9.00ಕ್ಕೆ ಪೂಜೆ, 9.30ಕ್ಕೆ ಜಿ.ಎಸ್. ಬಿ. ಯುವಜನ ಸಭಾ, ಶ್ರೀ ರಾಮ ಭಜನಾ ಮಂಡಳಿ ಹೆಬ್ರಿ ಇವರಿಂದ ಭಜನೆ, ಗಂಟೆ 10.00ಕ್ಕೆ ಬ್ರಾಹ್ಮಿ ಸಂಗೀತ ವಿದ್ಯಾಲಯ ಹೆಬ್ರಿ ಇಲ್ಲಿಯ ಮಕ್ಕಳಿಂದ ಭಕ್ತಿ ಸಂಗೀತ, ವಿವಿಧ ಮನೋರಂಜನಾ ಕಾರ್ಯಕ್ರಮ, ಮಧ್ಯಾಹ್ನ ಪೂಜೆ, “ಮಹಾ ಅನ್ನಸಂತರ್ಪಣೆ”, ಸಂಜೆ ಗಂಟೆ 5.00ಕ್ಕೆ ಮಹಾಪೂಜೆ ಜರಗಲಿದೆ.
