ಮೂಡುಬಿದಿರೆ

ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಕೇಶವ ಪೂಜಾರಿ, ಜೋಕಿಮ್ ಸ್ಪರ್ಧೆ- ತಾಲೂಕು ಪಂಚಾಯ್ತಿಗೆ ಸುಧಾಕರ್ ಕೋಟ್ಯಾನ್ ಪಕ್ಷೇತರ

ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ರಾಜಕೀಯ ನಾಯಕರುಗಳ ಚಿತ್ತ ಪರವಾಗಿ ಮೀಸಲಾತಿ ಪ್ರಕಟಗೊಂಡ ಕ್ಷೇತ್ರಗಳತ್ತ ನಾಟಿದೆ.

ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಮೀಸಲಾತಿ ಹಿಂದುಳಿದ ವರ್ಗ ಎ ಎಂಬುದಾಗಿ ತಿಳಿಯುತ್ತಿದ್ದಂತೆ ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಏರತೊಡಗಿದೆ. ಈ ಕ್ಷೇತ್ರದಲ್ಲಿರುವ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಕೂಡ ಸ್ಪರ್ಧಾ ಕಣಕ್ಕೆ ಧುಮುಕುವ ಸಾಧ್ಯತೆ ಇದೆ. ಮತ್ತೋರ್ವ ಮಾಜಿ ಅಧ್ಯಕ್ಷ ಜೋಕಿಮ್ ಕೊರೆಯ ಕೂಡ ಪಕ್ಷೇತರವಾಗಿ ಸ್ಪರ್ಧೆಗಿಳಿಯುವ ಲಕ್ಷಣ ಕಂಡು ಬರುತ್ತಿದೆ. ಕೇಶವ ಪೂಜಾರಿಯವರು ಬಿಜೆಪಿಯ ಪ್ರಭಾವಿ ನಾಯಕರಾಗಿದ್ದು ಕಲ್ಲಮುಂಡ್ಕೂರು ಸಹಕಾರಿ ಸಂಘದ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷದೊಂದಿಗೆ ಮುನಿಸಿಗೊಳಗಾಗಿದ್ದರು. ಆದರೆ ಪಕ್ಷ ಅವಕಾಶ ಒದಗಿಸಿದರೆ ಬಿಜೆಪಿಯಿಂದ ಅಥವಾ ಪಕ್ಷೇತರವಾಗಿ ಸ್ಪರ್ಧಿಸುವ ಲಕ್ಷಣ ಕಂಡುಬರುತ್ತಿದೆ. ಅಪಾರ ಸಂಖ್ಯೆಯ ಬೆಂಬಲಿಗರನ್ನು ಪಡೆದುಕೊಂಡಿರುವ ಅವರು ಪಂಚಾಯತು ಹಾಗೂ ಸಹಕಾರಿ ಸಂಘದ ಚುನಾವಣೆಯಲ್ಲಿ ಪಕ್ಷಕ್ಕಾಗಿ ಶ್ರಮಿಸಿದ್ದರು.

ಸುಧಾಕರ್ ಕೋಟ್ಯಾನ್ ಮೇಲ್ದಬೆಟ್ಟು ಕಲ್ಲಮುಂಡ್ಕೂರು ಕ್ಷೇತ್ರದಲ್ಲಿ ತಾಲೂಕು ಪಂಚಾಯತ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಲಕ್ಷಣ ಕಂಡುಬರುತ್ತಿದೆ. ಒಟ್ಟಾರೆಯಾಗಿ ಚುನಾವಣಾ ಕಣ ಸುದೀರ್ಘ ವರ್ಷಗಳ ನಂತರ ಕುತೂಹಲಕಾರಿಯಾಗಿ ಮೂಡಿಬರುತ್ತಿದೆ

Related posts

ಮಾದಕ ವ್ಯಸನದ ವಿರುದ್ಧ ಯುವಜನತೆ ಜಾಗೃತರಾಗಬೇಕು: ಪಿಎಸ್‌ಐ ಪ್ರತಿಭಾ ಕೆ.ಎಸ್.

Madhyama Bimba

ಮೂಡುಬಿದಿರೆ ಪುರಸಭೆಗೆ ಹೈ ಕೋರ್ಟ್ ನಿರ್ದೇಶನ

Madhyama Bimba

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More