ಕಾರ್ಕಳ: ಕಾರ್ಕಳ ಕುಂಟಲ್ಪಾಡಿ ಬಳಿ ಮೋಟಾರ್ ಸೈಕಲ್ಗೆ ಸ್ಕೂಟಿ ಡಿಕ್ಕಿಯಾದ ಘಟನೆ ಅ. 15ರಂದು ವರದಿಯಾಗಿದೆ.
ನಿಟ್ಟೆ ಗ್ರಾಮದ ಸತೀಶ ಎಂಬವರು ಮಗ ಸ್ವಸ್ತಿಕ್ನೊಂದಿಗೆ ಮೋಟಾರ್ ಸೈಕಲ್ನಲ್ಲಿ ಕಾರ್ಕಳದಿಂದ ನಿಟ್ಟೆ ಕಡೆಗೆ ಹೋಗುತ್ತಿರುವಾಗ ನಿಟ್ಟೆಯಿಂದ ಕಾರ್ಕಳದ ಕಡೆಗೆ ಸ್ಕೂಟಿ ಸವಾರನು ತನ್ನ ಸ್ಕೂಟಿಯನ್ನು ಅತೀ ವೇಗದಿಂದ ಸವಾರಿ ಮಾಡಿಕೊಂಡು ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಮೋಟಾರ್ ಸೈಕಲ್ ಸವಾರರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಎರಡೂ ವಾಹನಗಳು ಜಖಂಗೊಂಡಿರುತ್ತದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
