ಬೆಳ್ಳಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.) ಬೆಳ್ಳಣ್ಣು ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ದೇವೇಂದ್ರ ನಾಯಕ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು “ಎ” ದರ್ಜೆಯ ಲೆಕ್ಕ ಪರಿಶೋಧನಾ ವರದಿ ಹೊಂದಿದ್ದು ನಿವ್ವಳ ಲಾಭ 46.99 ಲಕ್ಷ ಹೊಂದಿದ್ದು ಸಂಘದ ಠೇವಣೆಯು ವರ್ಷಾಂತ್ಯಕ್ಕೆ 53.75 ಲಕ್ಷ ಹೊಂದಿದ್ದು ಸಂಘದ ಸದಸ್ಯರ ಠೇವಣಿಗಳಿಗೆ ಅತ್ಯಾಕರ್ಷಕ ಬಡ್ಡಿ ನೀಡುತ್ತಿದ್ದು ಚಿನ್ನಾಭರಣ, ಅಡಮಾನ ಈಡಿನ ಸಾಲ, ಭದ್ರತಾ ಸಾಲ, ಗೃಹ ಸಾಲ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಸಂಘದ ಕಾರ್ಯವ್ಯಾಪ್ತಿಗೊಳಪಟ್ಟ ಗ್ರಾಮಗಳ ಆಯ್ದ 7 ಜನ ಪಗತಿಪರ ರೈತ ಸದಸ್ಯರನ್ನು, 2024-25ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಘದ ಸದಸ್ಯರಾದ ಸೂಡ ಸುನಿಲ್ ದೇವಾಡಿಗರವರನ್ನು, ಸೇವಾ ನಿವೃತ್ತಿ ಹೊಂದಿದ ಸಂಘದ ಹಿರಿಯ ಸಿಬ್ಬಂದಿಯವರಾದ ಪ್ರೇಮ ಶೆಟ್ಟಿ ಮತ್ತು ದ್ವಾರಕನಾಥ ಜೋಗಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಸೆವ್ರಿನ್ ಡೇಸಾ, ನಿರ್ದೇಶಕರುಗಳಾದ ನಿತ್ಯಾನಂದ ಶೆಟ್ಟಿ, ದಿನೇಶ್ ಕುಲಾಲ್, ಕೆ ಸಂಜೀವ ಶೆಟ್ಟಿ, ಜೆರಾಲ್ಡ್ ಡಿಸೋಜ, ಉದಯ ನಾಯ್ಕ, ವಿಶಾಲಾಕ್ಷಿ ಬಂಗೇರ, ರಘುರಾಮ್ ರಾವ್, ರಾಮಚಂದ್ರ, ಯೋಗೀಶ್ ದೇವಾಡಿಗ, ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಜೆರಾಲ್ಡ್ ಡಿಸೋಜ ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂದೀಪ್ ನಾಯಕ್ ವಾರ್ಷಿಕ ಲೆಕ್ಕ ಪತ್ರ ವರದಿಯನ್ನು ಮಂಡಿಸಿದರು. ಸಿಬ್ಬಂದಿ ರವಿರಾಜ್ ಕುಲಾಲ್ ವಾರ್ಷಿಕ ವರದಿ ವಾಚಿಸಿದರು.
ಸಿಬ್ಬಂದಿ ರಾಜೇಶ್ ಧನ್ಯವಾದವಿತ್ತರು.
