ಹೆಬ್ರಿಯ ಭಾಸ್ಕರ್ ಜೋಯಿಸ್ ಅವರ ಸಹಕಾರದೊಂದಿಗೆ ಶ್ರೀ ಅನಂತಪದ್ಮನಾಭ ಸನ್ನಿಧಿಯಲ್ಲಿ ವಿಶ್ವ ತುಳುವ ಮಹಾಸಭೆಯ ಅಂತರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹೆಬ್ರಿ ವಲಯ ಸಮಿತಿ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಹೆಬ್ರಿ ನವೀನ್ ಅಡ್ಯಂತಾಯ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಹೆಬ್ರಿ ಭಾಸ್ಕರ್ ಜೋಯಿಸ್, ನೀರೆ ಕೃಷ್ಣ ಶೆಟ್ಟಿ, ಸೀತಾನದಿ ವಿಠ್ಠಲ್ ಶೆಟ್ಟಿ, ಸಂಚಾಲಕರಾಗಿ, ಬೆಳಿಂಜೆ ಹರೀಶ್ ಪೂಜಾರಿ, ಉಪಾಧ್ಯಕ್ಷರಾಗಿ ರಮೇಶ್ ಪೂಜಾರಿ ಶಿವಪುರ, ನಾಗೇಶ್ ನಾಯಕ್ ಸೀತಾನದಿ, ಕೃಷ್ಣಯ್ಯ ಶೆಟ್ಟಿ ವಕೀಲರು, ಹರೀಶ್ ಶೆಟ್ಟಿ ಹೆಬ್ರಿ, ಪ್ರಸನ್ನ ಕುಮಾರ್ ಶೆಟ್ಟಿ ಚಾರ, ಶಂಕರ್ ಶೇರಿಗಾರ್, ಜನಾರ್ದನ್ ಹೆಬ್ರಿ, ಕಾರ್ಯದರ್ಶಿಯಾಗಿ ಶಿಕ್ಷಕರಾದ ಮಂಜುನಾಥ ಕುಲಾಲ್, ಜೊತೆ ಕಾರ್ಯದಶಿಯಾಗಿ ಸುಕುಮಾರ್ ಮುನಿಯಾಲು, ಕೋಶಾಧಿಕಾರಿಯಾಗಿ ಹೆಬ್ರಿ ನರೇಂದ್ರ ನಾಯಕ್, ತುಳುವೇಶ್ವರ ಮತ್ತು ತುಳುವೇಶ್ವರಿ ದೇವಸ್ಥಾನದ ಸಂಚಾಲಕರಾದ ಸೀತಾರಾಮ ಹೆಬ್ಬಾರ್ ಕಬ್ಬಿನಾಲೆ, ಗೌರವ ಸಲಹೆಗಾರರಾಗಿ ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ಯಾಧರ್ ಹೆಗ್ಡೆ, ಹೆಬ್ರಿ ನಿವೃತ್ತ ಶಿಕ್ಷಕರಾದ ಹರಿದಾಸ್ ಹೆಗ್ಡೆ, ನಿವೃತ್ತ ಕಂದಾಯ ಅಧಿಕಾರಿ ಯಂ ತಿಮ್ಮಪ್ಪ ಶೆಟ್ಟಿಗಾರ್, ಸುಂದರ ಹೆಗ್ಡೆ ಸುಮನಸ ಹೆಬ್ರಿ, ಬಾಲಚಂದ್ರ ಮುದ್ರಾಡಿ, ಲಕ್ಷ್ಮಣ್ ಆಚಾರ್ಯ ವರಂಗ ಆಯ್ಕೆಯಾದರು.
ಈ ಎಲ್ಲಾ ಪದಾಧಿಕಾರಿಗಳನ್ನು ವಿಶ್ವ ತುಳುವ ಮಹಾಸಭೆಯ ಅಂತರಾಷ್ಟ್ರೀಯ ಅಧ್ಯಕ್ಷರು ಸರ್ವೋತ್ತಮ ಶೆಟ್ಟಿ, ವಿಶ್ವ ತುಳುವ ಮಹಾಸಭೆಯ ಅಂತರಾಷ್ಟ್ರೀಯ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ್ ರೈ, ಅಂತರಾಷ್ಟ್ರೀಯ ಫೌಂಡೇಶನ್ ಸಂಚಾಲಕರಾದ ಡಾ ರಾಜೇಶ್ ಆಳ್ವ, ವಿಶ್ವ ತುಳುವ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ, ಸಂಚಾಲಕ ವಿಶ್ವನಾಥ್ ಆಚಾರ್ಯ ಇವರ ಉಪಸ್ಥಿತಿಯಲ್ಲಿ ಮತ್ತು ರಾಜ್ಯಾಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ ಇವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ವಲಯ ಸಮಿತಿ ರಚನೆಯಾಗಿದೆ.
ಈ ಎಲ್ಲಾ ಪ್ರಕ್ರಿಯೆಗೆ ಜಿಲ್ಲಾ ಅಧ್ಯಕ್ಷರಾದ ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ ಮತ್ತು ಹೆಬ್ರಿ ಲಯನ್ಸ್ ಕ್ಲಬ್ಬಿನ ಹಿರಿಯ ಸದಸ್ಯರು, ಹೆಬ್ರಿಯ ಸರ್ವತೋಮುಖ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸದಾ ಸಮಾಜ ಚಿಂತಕರಾಗಿರುವ ಲಯನ್ ಟಿ ಜಿ ಆಚಾರ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಶೆಟ್ಟಿ ಸಾಯಿರಾಂ ಅವರು ಸಮಿತಿ ರಚಿಸುವಲ್ಲಿ ಸಹಕರಿಸಿದರು.
ಈ ಸಭೆಯಲ್ಲಿ ಟಿ ಜಿ ಆಚಾರ್ಯ ಅವರನ್ನು ವಿಶ್ವ ತುಳುವ ಮಹಾಸಭೆಯ ಜಿಲ್ಲಾ ಕಾರ್ಯದರ್ಶಿಯಾಗಿ ಅಂತರಾಷ್ಟ್ರೀಯ ಅಧ್ಯಕ್ಷರು ಸರ್ವೋತ್ತಮ ಶೆಟ್ಟಿ ಅವರು ಘೋಷಣೆ ಮಾಡಿದರು.
