ಬೆಳುವಾಯಿ: ಜನರೆಡೆಗೆ ಸರಕಾರಿ ಅಧಿಕಾರಿಗಳನ್ನು ಕರೆದೊಯ್ಯುವ ವಿಶಿಷ್ಟ ಸೇವೆ ಕರ್ನಾಟಕ ಸರಕಾರದ ಪ್ರಜಾ ಸೇವಾ ಆಂದೋಲನ ಬೆಳುವಾಯಿಯ ಕಂಡಿಗ ಗ್ರೀನ್ಸ್ ಸಭಾಭವನದಲ್ಲಿ ಇಂದು ನಡೆಯಿತು.

ಶಾಸಕ ಉಮಾನಾಥ ಏ. ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮೂಡುಬಿದಿರೆ ಹಾಗೂ ಮೂಲ್ಕಿಯಲ್ಲಿ ಪ್ರತಿ ತಿಂಗಳ 15 ದಿನಕ್ಕೊಮ್ಮೆ ಪ್ರಜಾ ಸೇವಾ ಆಂದೋಲನ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಇಲಾಖಾಧಿಕಾರಿಗಳು ಜನರ ಸಮಸ್ಯೆಗಳನ್ನು ಅರಿತುಕೊಂಡು ಅವರಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಿ ಸೇವೆ ನೀಡಬೇಕಾಗಿ ತಿಳಿಸಿದರು. ಸಭೆಯಲ್ಲಿ ಹಾಜರಿರಾದ ಅಧಿಕಾರಿಗಳ ವಿರುದ್ಧ ಶಾಸಕರು ಗರಂಗೊಂಡರು.

ತಹಶೀಲ್ದಾರ್ ಶ್ರೀಧರ ಎಸ್ ಮಂದಲಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಜನರ ಸ್ಥಳೀಯ ಸಮಸ್ಯೆಗಳನ್ನು ಹೋಬಳಿ ಮಟ್ಟದಲ್ಲಿ ಪರಿಹರಿಸಲು ಈ ಆಂದೋಲನ ಅತ್ಯಂತ ಉಪಯುಕ್ತ. ಅರ್ಜಿಗಳನ್ನು ಇಲಾಖಾ ಪೋರ್ಟಲ್ ನಲ್ಲಿ ದಾಖಲಿಸಿ ವಿಲೇವಾರಿ ನಡೆಸಲಾಗುವುದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಕನ್ನಡ ಜಾಗೃತ ಬಳಗದ ಸದಸ್ಯ ರಾಜೇಶ್ ಕಡಲಕೆರೆ, ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಬಿ., ಹಾಗೂ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ರಾಮ್ ಕೆ.ಕಾರ್ಯಕ್ರಮ ನಿರೂಪಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಅರ್ಜಿಗಳನ್ನು ನೀಡಿ ಪರಿಹಾರದ ಮಾಹಿತಿ ಪಡೆದುಕೊಂಡರು.
ವಿವಿಧ ಇಲಾಖೆಗಳಿಗೆ ಸಂಬಂಧಿಸಿ 35 ಅರ್ಜಿಗಳನ್ನು ಸ್ವೀಕರಿಸಲಾಯಿತು.
