ಕಾರ್ಕಳಹೆಬ್ರಿ

ವರಂಗ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ

ವರಂಗ: ಇಂದು ನಾವು ಸಿಬ್ಬಂದಿಗೆ ಮಾಡಿದ ಸನ್ಮಾನದಿಂದ ಅವರ ಜವಾಬ್ದಾರಿ ಹೆಚ್ಚಿದೆ. ಮುಂದಿನ ವರ್ಷಕ್ಕೆ ಸಂಘವು 1 ಕೋಟಿ ರೂ. ಲಾಭದ ಗುರಿ ಇಟ್ಟುಕೊಳ್ಳಲಾಗಿದೆ ಎಂದು ವರಂಗ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಶುಭದರ ಶೆಟ್ಟಿ ಹೇಳಿದರು.


ವರಂಗ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸೆ. 19ರಂದು ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 


ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಆಚಾರ್ಯ, ಚಂದ್ರಶೇಖರ ಬಾಯಾರಿ, ಜಗದೀಶ್ ಹೆಗ್ಡೆ, ಅಧ್ಯಕ್ಷರಾದ ಶುಭಧರ ಶೆಟ್ಟಿ ಸಿಬ್ಬಂದಿ, ಪಿಗ್ಮಿ ಸಂಗ್ರಾಹಕರು ಸೇರಿದಂತೆ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಗತಿಪರ ಕೃಷಿಕರನ್ನು ಗೌರವಿಸಲಾಯಿತು. ಸದಸ್ಯರಿಗೆ ಶೇ. ೧೫ರಷ್ಟು ಡಿವಿಡೆಂಟ್ ನೀಡಲಾಯಿತು.

ಉಪಾಧ್ಯಕ್ಷರಾದ ಕೃಷ್ಣಕಾಂತ್ ನಾಯಕ್, ಹೆಚ್ಚುವರಿ ಕಾರ್ಯದರ್ಶಿ ಜಯಂತ್ ಕುಮಾರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಪೈ, ನಿರ್ದೇಶಕರಾದ ಚಂದ್ರಶೇಖರ ಬಾಯರಿ, ಲಕ್ಷ್ಮಣ ಆಚಾರ್ಯ, ಕೃಷ್ಣ ಆಚಾರ್ಯ, ಸುರೇಶ್ ಶೆಟ್ಟಿಗಾರ್, ಜಗದೀಶ್ ಹೆಗ್ಡೆ, ಸುಧನ್ವ ಪಾಣಾರ, ಸುರೇಶ್ ನಾಯ್ಕ್, ಇಂದಿರಾ ಪೂಜಾರ್ತಿ, ಶಶಿಕಲಾ ಡಿ. ಪೂಜಾರಿ, ಗೋಪಿನಾಥ್ ಭಟ್ ಉಪಸ್ಥಿತರಿದ್ದರು.

ಸಿಇಓ ಗೋಪಾಲಕೃಷ್ಣ ಪೈ ವರದಿ ಮಂಡಿಸಿದರು. ಗೋಪಿನಾಥ್ ಭಟ್ ಸ್ವಾಗತಿಸಿದರು.

Related posts

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಆಯ್ಕೆ ಅನಧಿಕೃತ: ದಲಿತ ಸಂಘಟನೆ ಮುಖಂಡರ ಆಕ್ಷೇಪ

Madhyama Bimba

ಕಾರ್ಕಳ: ಸಾಣೂರಿನಲ್ಲಿ ಕೋಳಿ ಅಂಕ- ಪ್ರಕರಣ ದಾಖಲು

Madhyama Bimba

ಕ್ರೈಸ್ಟ್‌ಕಿಂಗ್: ತಂಬಾಕು ಸೇವನೆಯ ದುಷ್ಪರಿಣಾಮಗಳ ಮಾಹಿತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More