ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಆರತಿ ಕೃಷ್ಣ ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಪಕ್ಷದ ಬಲವರ್ಧನೆ ಹಾಗೂ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ನವೀನ್ ಅಡ್ಯಂತಾಯ, ಬ್ಲಾಕ್ ಉಸ್ತುವಾರಿಯಾದ ದಿನೇಶ್ ಶೆಟ್ಟಿ ಚಾರಾ, ಬ್ಲಾಕ್ ಕಾರ್ಯದರ್ಶಿ ಜನಾರ್ದನ, ಪಕ್ಷದ ವಕ್ತಾರರಾದ ನಿತೀಶ್ ಎಸ್.ಪಿ., ಭೂನ್ಯಾಯ ಮಂಡಳಿ ಸದಸ್ಯರಾದ ರಾಘವೇಂದ್ರ ನಾಯ್ಕ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಸಂದೀಪ್ ಆಚಾರ್ಯ, ಗ್ರಾಮ ಪಂಚಾಯತ್‌ನ ನಿಕಟಪೂರ್ವ ಸದಸ್ಯರಾದ ಸಂತೋಷ್ ನಾಯ್ಕ್ ಕನ್ಯಾನ, ಪಕ್ಷದ ಪ್ರಮುಖರಾದ ನಿಲೇಶ್ ಪೂಜಾರಿ ಹರೀಶ್ ಶೆಟ್ಟಿ ನಡಪಾಲು ಉಪಸ್ಥಿತರಿದ್ದರು.


